ಟೀಂ ಇಂಡಿಯಾಗೆ ಭುವಿ ಆಯ್ಕೆ ಹಿಂದಿನ ರಹಸ್ಯವೇನು? ಕೋಚ್ ಹೇಳಿದ್ದೇನು?
ರಾಂಚಿ: ವೆಸ್ಟ್ ಇಂಡೀಸ್ ವಿರುದ್ಧ ಗುರುವಾರ ರಾಂಚಿಯಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ; ಆದರೆ ಪಂದ್ಯಕ್ಕೂ ಮುನ್ನ ನಡೆದ ಚರ್ಚೆಗಳು ಕೇವಲ ಪ್ರಸ್ತುತ ಸರಣಿಗೆ ಮಾತ್ರ ಸೀಮಿತವಾಗಿರಲಿಲ್ಲ. ರಾಂಚಿಯಲ್ಲಿರುವ ಪ್ರಸ್ತುತ ತಂಡದಲ್ಲಿ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಇಲ್ಲದಿದ್ದರೂ, ಮುಂಬರುವ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಗಾಗಿ ಅವರನ್ನು ಆಯ್ಕೆ ಮಾಡಿರುವುದು ಭಾರತದ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿನ ಪ್ರಮುಖ ಚರ್ಚಾ ವಿಷಯಗಳಲ್ಲಿ ಒಂದಾಗಿತ್ತು.
ಭುವನೇಶ್ವರ್ ಕುಮಾರ್ ಅವರು ನಾಲ್ಕು ವರ್ಷಗಳ ಬಳಿಕ ಟೀಂ ಇಂಡಿಯಾ ಕ್ಯಾಂಪ್ ಗೆ ಮರಳುತ್ತಿದ್ದಾರೆ. ಐಪಿಎಲ್ ನಲ್ಲಿ ನೀಡಿದ ಅಭೂತಪೂರ್ವ ಪ್ರದರ್ಶನದ ಬಳಿಕ ಭುವಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಭಾರತದ ಸಹಾಯಕ ಕೋಚ್ ಸಿತಾಂಶು ಕೋಟಕ್ ಅವರು 36 ವರ್ಷದ ಭುವಿ ಆಯ್ಕೆ ಹಿಂದಿನ ಕಾರಣದ ಬಗ್ಗೆ ಮಾತನಾಡಿದ್ದಾರೆ.
ಭಾರತದ ಟಿ20ಐ ಬೌಲಿಂಗ್ ವಿಭಾಗದಲ್ಲಿ ಹಲವಾರು ಯುವ ವೇಗದ ಬೌಲರ್‌ಗಳಿರುವಾಗ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅಗತ್ಯಗಳನ್ನು ಚೆನ್ನಾಗಿ ಅರಿತಿರುವ ಅನುಭವಿ ಆಟಗಾರನೊಬ್ಬನ ಉಪಸ್ಥಿತಿಯ ಮಹತ್ವವನ್ನು ಕಡೆಗಣಿಸುವಂತಿಲ್ಲ ಎನ್ನುವುದು ಕೋಟಕ್ ಅಭಿಪ್ರಾಯ.
“ಸಹಜವಾಗಿಯೇ ಆಯ್ಕೆಗಾರರಿಗೆ ಸಂಬಂಧಿಸಿದ್ದು, ಆದರೆ ನನ್ನ ಅನಿಸಿಕೆಯ ಆಧಾರದ ಮೇಲೆ ನಾನು ನಿಮಗೆ ಉತ್ತರಿಸಬಲ್ಲೆ," ಎಂದು ರಾಂಚಿಯಲ್ಲಿ ನಡೆದ ಪಂದ್ಯಪೂರ್ವ ಮಾಧ್ಯಮ ಸಂವಾದದಲ್ಲಿ ಕೋಟಕ್ ಹೇಳಿದರು.