South India's No.1 Digital Mobile Paper
LIVE
Welcome to Smacy Media

ಬಿಜೆಪಿ–ಜೆಡಿಎಸ್‌ ಜತೆಗಿದ್ದರಷ್ಟೇ ಗೆಲುವು–ಬಿ.ಎಸ್‌.ಯಡಿಯೂರಪ್ಪ

ಬಿಜೆಪಿ–ಜೆಡಿಎಸ್‌ ಜತೆಗಿದ್ದರಷ್ಟೇ ಗೆಲುವು–ಬಿ.ಎಸ್‌.ಯಡಿಯೂರಪ್ಪ

ಬೆಂಗಳೂರು: 'ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಒಟ್ಟಾದರಷ್ಟೇ ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ಕಿತ್ತೊಗೆಯಲು ಸಾಧ್ಯ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಹೇಳಿದ್ದಾರೆ. ನನ್ನದೂ ಅದೇ ಅಭಿಪ್ರಾಯ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಎಚ್‌.ಡಿ.ದೇವೇಗೌಡ ಅವರ ಪದ್ಮನಾಭನಗರದ ನಿವಾಸಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು, ನಂತರ ಸುದ್ದಿಗಾರರ ಜತೆ ಮಾತನಾಡಿದರು. ‘ರಾಜ್ಯದಲ್ಲಿ ಮುಂದೆ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಕಾಂಗ್ರೆಸ್ಸಿನವರಿಗೂ ಅರಿವಾಗುತ್ತಿದೆ. ನನಗೂ ಹಾಗೇ ಅನಿಸಿದೆ’ ಎಂದರು.

‘ದೇವೇಗೌಡ ಅವರಿಗೆ ದೀಪಾವಳಿಯ ಶುಭಾಶಯ ತಿಳಿಸಲು ಬಂದಿದ್ದೆ. ಜತೆಗೆ ರಾಜ್ಯದ ಪ್ರಚಲಿತ ರಾಜಕೀಯ ವಿದ್ಯಮಾನಗಳನ್ನೂ ಚರ್ಚಿಸಿದ್ದೇವೆ. ಈ ಸಭೆಗೆ ಕುಮಾರಸ್ವಾಮಿ ಅವರೂ ಬರಬೇಕಿತ್ತು. ಅನಿವಾರ್ಯ ಕಾರಣಗಳಿಂದ ಅವರು ಬಂದಿಲ್ಲ. ಆದರೆ, ಅವರೊಂದಿಗೂ ಸುದೀರ್ಘವಾಗಿ ಮಾತನಾಡಿದ್ದೇನೆ’ ಎಂದು ತಿಳಿಸಿದರು.

ಪಂಚಾಯತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಮುಂದುವರೆಯುತ್ತದೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ, ‘ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ದೇವೇಗೌಡ ಅವರು ಒಟ್ಟಾಗಿ ಕುಳಿತು ತೀರ್ಮಾನಿಸುತ್ತಾರೆ. ಅವರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ’ ಎಂದರು.

‘ಇವತ್ತಿನ ಸಭೆಯಲ್ಲಿ ಸಣ್ಣಪುಟ್ಟ ವಿಷಯಗಳ ಬಗ್ಗೆ ಚರ್ಚೆಯಾಗಿಲ್ಲ. ಪ್ರಮುಖ ವಿಷಯಗಳನ್ನೇ ಚರ್ಚಿಸಿದ್ದೇವೆ. ಮೈತ್ರಿ ಮತ್ತಿತರ ವಿಚಾರದಲ್ಲಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಂತರದ ಹಂತದ ನಾಯಕರ ಜತೆ ಆನಂತರ ಮಾತನಾಡಬೇಕಾಗುತ್ತದೆ’ ಎಂದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುತ್ತದೆಯೇ ಎಂದು ಪ್ರಶ್ನಿಸಿದಾಗ, ‘ಕಾಂಗ್ರೆಸ್‌ನಲ್ಲಿ ಗೊಂದಲ, ಬಡಿದಾಟ ಜೋರಾಗಿ ನಡೆಯುತ್ತಿದೆ. ಅವರೆಲ್ಲಾ ಪದೇ–ಪದೇ ದೆಹಲಿಗೆ ಹೋಗಿ, ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಬರುತ್ತಿದ್ದಾರೆ. ಇದೆಲ್ಲವನ್ನೂ ನೋಡಿದರೆ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಕಾದು ನೋಡಬೇಕಷ್ಟೇ’ ಎಂದರು.

‘ರಾಜ್ಯದಲ್ಲಿ ಆಡಳಿತಯಂತ್ರ ಕುಸಿದಿದೆ. ಹಣಕಾಸಿನ ಸ್ಥಿತಿ ಹದಗೆಟ್ಟಿದೆ. ಬಸ್ಸುಗಳಿಗೆ ಡೀಸೆಲ್‌ ತುಂಬಿಸಲು ಸರ್ಕಾರದ ಬಳಿ ಹಣವಿಲ್ಲ. ಜನರು ಕೊಟ್ಟ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ’ ಎಂದು ಪ್ರಶ್ನಿಸಿದರು.

📍 Bangalore Urban
📰 Udayavani
🕒 1 day ago

Related News

ಪಾಕಿಸ್ತಾನ ತಂಡದ ಗೆಲುವನ್ನು ಸಂಭ್ರಮಿಸಿದ್ದಕ್ಕಾಗಿ ಪ್ರಧಾನಿ ಷರೀಫ್ ವಿರುದ್ಧ ಟ್ರೋಲ್‌!
ಪಾಕಿಸ್ತಾನ ತಂಡದ ಗೆಲುವನ್ನು ಸಂಭ್ರಮಿಸಿದ್ದಕ್ಕಾಗಿ ಪ್ರಧಾನಿ ಷರೀಫ್ ವಿರುದ್ಧ ಟ್ರೋಲ್‌!
ರಾಹುಲ್‌ ಗಾಂಧಿಗೆ ನಾಳೆ ಸಿದ್ದು ‘ಸ್ಟಿಂಗ್‌’ ದೂರು
ರಾಹುಲ್‌ ಗಾಂಧಿಗೆ ನಾಳೆ ಸಿದ್ದು ‘ಸ್ಟಿಂಗ್‌’ ದೂರು
Today's Motivation
Today's Motivation
⬅ Back
➕ Post Ad
To Ads ➡