South India's No.1 Digital Mobile Paper
LIVE
Welcome to Smacy Media

ಶಬರಿಮಲೆ ಯಾತ್ರಿಗಳಿಗೆ ತಲಾ ₹2 ಲಕ್ಷ ಜೀವ ವಿಮೆ–ಟಿಡಿಬಿ

ಶಬರಿಮಲೆ ಯಾತ್ರಿಗಳಿಗೆ ತಲಾ ₹2 ಲಕ್ಷ ಜೀವ ವಿಮೆ–ಟಿಡಿಬಿ

ತಿರುವನಂತಪುರ: ಶಬರಿಮಲೆ ಯಾತ್ರಾರ್ಥಿಗಳಿಗೆ ಇದೇ ಮೊದಲ ಬಾರಿಗೆ ತಲಾ ₹2 ಲಕ್ಷ ಮೊತ್ತದ ಜೀವ ವಿಮಾ ಯೋಜನೆಯನ್ನು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಪರಿಚಯಿಸಿದೆ.

ನವೆಂಬರ್‌ 17ರಿಂದ ಪ್ರಸಕ್ತ ಸಾಲಿನ ಶಬರಿಮಲೆ ಯಾತ್ರೆ ಆರಂಭವಾಗಲಿದ್ದು, ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಭಕ್ತರು ಮೃತಪಟ್ಟರೆ, ಅವರ ಕುಟುಂಬಕ್ಕೆ ತಲಾ ₹2 ಲಕ್ಷ ಮೊತ್ತದ ವಿಮಾ ಪರಿಹಾರ ಲಭಿಸಲಿದೆ. ‘ಎಲ್‌ಐಸಿ ಸಹಯೋಗದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ಟಿಡಿಬಿ ಅಧ್ಯಕ್ಷ ಕೆ. ಜಯಕುಮಾರ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ಹಿಂದೆ ಯಾತ್ರಿಕರಿಗೆ ಅಪಘಾತ ವಿಮಾ ಯೋಜನೆ ಜಾರಿಗೊಳಿಸಲಾಗಿತ್ತು. ಆದರೆ, ಜೀವ ವಿಮಾ ಯೋಜನೆ ಇದೇ ಮೊದಲು. ವಿಮಾ ಕಂತಿನ ಪೂರ್ಣ ಮೊತ್ತವನ್ನು ಟಿಡಿಬಿಯೇ ಭರಿಸಲಿದೆ. ಇದಕ್ಕಾಗಿ ಅಂದಾಜು ₹1 ಕೋಟಿ ಖರ್ಚಾಗಬಹುದು’ ಎಂದು ಅವರು ಹೇಳಿದರು.

’ಶಬರಿಮಲೆಯಲ್ಲಿ ಅರವಣ ಪ್ರಸಾದಕ್ಕೆ ಯಾವುದೇ ಕೊರತೆ ಇಲ್ಲ’ ಎಂದು ಜಯಕುಮಾರ್‌ ಸ್ಪಷ್ಟಡಿಸಿದ್ದಾರೆ.

📍 Davanagere
📰 Prajavani
🕒 1 day ago

Related News

ಪಾಕಿಸ್ತಾನ ತಂಡದ ಗೆಲುವನ್ನು ಸಂಭ್ರಮಿಸಿದ್ದಕ್ಕಾಗಿ ಪ್ರಧಾನಿ ಷರೀಫ್ ವಿರುದ್ಧ ಟ್ರೋಲ್‌!
ಪಾಕಿಸ್ತಾನ ತಂಡದ ಗೆಲುವನ್ನು ಸಂಭ್ರಮಿಸಿದ್ದಕ್ಕಾಗಿ ಪ್ರಧಾನಿ ಷರೀಫ್ ವಿರುದ್ಧ ಟ್ರೋಲ್‌!
ರಾಹುಲ್‌ ಗಾಂಧಿಗೆ ನಾಳೆ ಸಿದ್ದು ‘ಸ್ಟಿಂಗ್‌’ ದೂರು
ರಾಹುಲ್‌ ಗಾಂಧಿಗೆ ನಾಳೆ ಸಿದ್ದು ‘ಸ್ಟಿಂಗ್‌’ ದೂರು
Today's Motivation
Today's Motivation
⬅ Back
➕ Post Ad
To Ads ➡