TVK Vijay Rally Stampede: ವಿಜಯ್ v/s ಸರ್ಕಾರ; ತಮಿಳುನಾಡಲ್ಲಿ ಕಾಲ್ತುಳಿತ ಬ್ಲೇಮ್ ಗೇಮ್! ಬಂಧಿಯಾಗ್ತಾರಾ 'ದಳಪತಿ'?
ಸೆಪ್ಟೆಂಟರ್ 27 ಶನಿವಾರದಂದು ತಮಿಳುನಾಡು (Tamilnadu) ರಾಜಕೀಯದಲ್ಲೇ ಕಂಡು ಕೇಳಿರದ ದುರ್ಘಟನೆಯೊಂದು ಸಂಭವಿಸಿ ಹೋಗಿದೆ. ಇದಕ್ಕೆಲ್ಲಾ ಟಿವಿಕೆ ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್ ಪರೋಕ್ಷ ಕಾರಣ ಎಂದು ವಿಪಕ್ಷಗಳ ನಾಯಕರು (Opposition Leaders) ಆರೋಪ ಮಾಡ್ತಿದ್ದಾರೆ. ತಮಿಳುನಾಡು ಪಾಲಿಟಿಕ್ಸ್ನಲ್ಲಿ ವಿಜಯಪತಾಕೆ ಹಾರಿಸೋ ಕನಸು ಕಾಣ್ತಿದ್ದ ನಟ ವಿಜಯ್ ಅವರನ್ನ ಈ ಘಟನೆ ವಿಚಲಿತಗೊಳಿಸಿದೆ. ಅಮಾಯಕ ಜೀವಗಳ ಬಲಿಯಲ್ಲೂ ಪಾಲಿಟಿಕ್ಸ್ ಶುರುವಾಗಿದೆ.
ಕಾಲ್ತುಳಿತದ ಬ್ಲೇಮ್ ಗೇಮ್ ಶುರು ನಟ-ರಾಜಕಾರಣಿ ವಿಜಯ್ ನಡೆಸಿದ ರ್ಯಾಲಿಯಲ್ಲಿ 41 ಜನರು ಸಾವನ್ನಪ್ಪಿದ್ದು ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಮಾಯಕರು ಬಲಿಯಾದ ಒಂದು ದಿನದ ಬಳಿಕ ಕರೂರ್ ಕಾಲ್ತುಳಿತದ ಬ್ಲೇಮ್ ಗೇಮ್ ಶುರುವಾಗಿದೆ. ತಮಿಳುನಾಡು ಸರ್ಕಾರ ಸಭೆ ಮೇಲೆ ಸಭೆ ನಡೆಸ್ತಿದೆ ಎಂದು ತಿಳಿದು ಬಂದಿದೆ..