ಕೇರಳ ಸರ್ಕಾರದಿಂದ ಅ.4 ರಂದು ನಟ ಮೋಹನ್ ಲಾಲ್‌ಗೆ ಸನ್ಮಾನ, ಅದ್ಧೂರಿ ಕಾರ್ಯಕ್ರಮ
ಬೆಂಗಳೂರು: ಮಲಯಾಳಂ ಚಿತ್ರರಂಗದ ಖ್ಯಾತ ಹಿರಿಯ ನಟ ಮೋಹನ್ ಲಾಲ್ ಅವರು ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿರುವ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಇತ್ತೀಚೆಗೆ ಭಾಜನರಾಗಿದ್ದಾರೆ.
‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ಹಾಗೂ ಚಿತ್ರರಂಗದಲ್ಲಿ ಅವರ ಸಾಧನೆ ಮೆಚ್ಚಿ ಕೇರಳ ಸರ್ಕಾರ ಅವರಿಗೆ ಅಕ್ಟೋಬರ್ 4 ರಂದು ತಿರುವನಂತಪುರದಲ್ಲಿ ಸನ್ಮಾನ ಸಮಾರಂಭವನ್ನು ಆಯೋಜಿಸಿದೆ.