ವರ್ಷದ ಕೊನೆಯಲ್ಲಿ ಹರ್ಷ ನೀಡಿದ ರೈಲ್ವೆ ಷೇರುಗಳು, ಸತತ ಮೂರನೇ ದಿನವೂ ಜಿಗಿತ!
ಬೆಂಗಳೂರು (ಡಿ.23): ಈ ವರ್ಷದ ಬಜೆಟ್ ಬಳಿಕ ರೈಲ್ವೇಸ್ ಷೇರುಗಳ ದುರ್ಲಭ ಕಾಲ ಆರಂಭವಾಗಿತ್ತು. ಕಳೆದ ವರ್ಷ ಹೂಡಿಕೆದಾರರನ್ನು ಶ್ರೀಮಂತ ಮಾಡಿದ್ದ ರೈಲ್ವೇಸ್ ಷೇರುಗಳು ಈ ವರ್ಷ ತಮ್ಮ ಪೀಕ್‌ನಿಂದ ಪಾತಾಳಕ್ಕೆ ಕುಸಿದಿದ್ದವು. ಅದಕ್ಕೆ ಕಾರಣವೂ ಇತ್ತು. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಈ ಭಾರಿ ರೈಲ್ವೇಸ್‌ನ ಬಂಡವಾಳ ವೆಚ್ಚ ಹೆಚ್ಚು ಮಾಡಿರಲಿಲ್ಲ. ಆದರೆ, ವರ್ಷದ ಕೊನೆಯ ಹಂತದಲ್ಲಿ ರೈಲ್ವೇಸ್ ಷೇರುಗಳು ಹರ್ಷ ನೀಡಲು ಆರಂಭಿಸಿವೆ. ವರ್ಷದಲ್ಲಿ 2ನೇ ಬಾರಿಗೆ ರೈಲ್ವೆ ಟಿಕೆಟ್ ದರವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದ ನಂತರದಿಂದ ಸತತ ಮೂರನೇ ದಿನ ಷೇರು ಮಾರುಕಟ್ಟೆಯಲ್ಲಿ ರೈಲ್ವೇಸ್ ವಲಯದ ಷೇರುಗಳು ಕಮಾಲ್ ಮಾಡಿವೆ.