ಕಾಶಿ ವಿಶ್ವನಾಥ ಭಕ್ತರೇ ಗಮನಿಸಿ: ಇಂದಿನಿಂದ ಹೊಸ ನಿಯಮ ಜಾರಿ! ದರ್ಶನಕ್ಕೆ ತೆರಳುವ ಮುನ್ನ ಈ ಬದಲಾವಣೆಗಳನ್ನು ತಪ್ಪದೇ ತಿಳ್ಕೊಳ್ಳಿ!
ವಾರಣಾಸಿ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಕಾಶಿ ವಿಶ್ವನಾಥನನ್ನು ಪ್ರಮುಖ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಜನರು ಕಾಶಿ ವಿಶ್ವನಾಥನ ದರ್ಶನ ಪಡೆದು ವರ್ಷವನ್ನು ಆರಂಭಿಸಲು ಬಯಸುತ್ತಾರೆ. ಈ ಕಾರಣದಿಂದ ಕಾಶಿ ವಿಶ್ವನಾಥ ಧಾಮದಲ್ಲಿ ಭಕ್ತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕಾಶಿ ವಿಶ್ವನಾಥ ನ್ಯಾಯ ಪರಿಷತ್ ಮಹತ್ವದ ನಿರ್ಧಾರ ಕೈಗೊಂಡಿದೆ. ಕಾಶಿ ವಿಶ್ವನಾಥ ಧಾಮದಲ್ಲಿ ಇಂದಿನಿಂದ ಅಂದರೆ ಡಿಸೆಂಬರ್ 25 ರಿಂದ ಸ್ಪರ್ಶ ದರ್ಶನವನ್ನು ನಿಷೇಧಿಸಲಾಗಿದೆ. ಈ ಸಮಯದಲ್ಲಿ ವಿಐಪಿ, ಪ್ರೋಟೋಕಾಲ್ ಇತ್ಯಾದಿಗಳಿಗೂ ನಿರ್ಬಂಧವಿರುತ್ತದೆ.