ಧಮ್ ಎಳೆಯೋ ಮಂದಿಗೆ ಗುಡ್‌ನ್ಯೂಸ್, ಸಿಗರೇಟ್ ರೇಟ್ 72 ರೂಪಾಯಿಗೆ ಏರಿಕೆ ಆಗಲ್ಲ!
ಬೆಂಗಳೂರು (ಡಿ.29): ಭಾರತದಲ್ಲಿ ಸಿಗರೇಟ್ ಮೇಲೆ ಹಾಕಲಾಗುತ್ತಿರುವ ಹೊಸ ತೆರಿಗೆಯ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಸೋಶಿಯಲ್ ಮೀಡಿಯಾದಿಂದ ಹಿಡಿದು ಗಲ್ಲಿಗಲ್ಲಿಯಲ್ಲೂ ಅದರ ಬಗ್ಗೆ ಚರ್ಚೆ ಆಗುತ್ತಿದೆ. ಸಿಗರೇಟ್ ಬೆಲೆ ಎಷ್ಟಾಗಬಹುದು ಎನ್ನುವ ಕುತೂಹಲದೊಂದಿಗೆ, ಹೊಸ ತೆರಿಗೆ ಅಡಿಯಲ್ಲಿ ಒಂದು ಸಿಗರೇಟ್‌ನ ಬೆಲೆ 72 ರೂಪಾಯಿಗೆ ಏರಿಕೆ ಆಗಲಿದೆ ಎನ್ನುವ ಸುದ್ದಿಗಳು ಬಂದಿದ್ದವು. ಆದರೆ, ಸಿಗರೇಟ್ ಮೇಲೆ ಹಾಕಲಾಗುತ್ತಿರುವ ನಿಜವಾದ ತೆರಿಗೆ ಹಾಗೂ ಸುಂಕವನ್ನು ಗಮನಿಸಿದರೆ ಈ ವಿಚಾರ ತಪ್ಪು ಅನ್ನೋದು ಗೊತ್ತಾಗುತ್ತದೆ. ಸಿಗರೇಟ್ ಬೆಲೆ ಏರಿಕೆ ಆಗುವುದು ಖಚಿತ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ, ಒಂದು ಸಿಗರೇಟ್‌ಗೆ 18 ರಿಂದ 72 ರೂಪಾಯಿ ಆಗೋದು ಸುಳ್ಳು. ಬೆಲೆ ಏರಿಕೆ ಪ್ರಮಾಣ ಹೇಗಿರಲಿದೆ ಅನ್ನೋದನ್ನು ರೆಡ್ಡಿಟ್‌ನಲ್ಲಿ ಯೂಸರ್ ಒಬ್ಬರು ವಿವರಿಸಿದ್ದಾರೆ.