ಕಾರವಾರ | ಮೂಲೆಗುಂಪಾದ ‘ಕ್ಷಿಪಣಿ’ ಮತ್ತೆ ಮುನ್ನೆಲೆಗೆ: ಪ್ರವಾಸಿಗರ ವೀಕ್ಷಣೆಗೆ ಅವಕಾಶ
ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರಕ್ಕೆ ಭೇಟಿ ನೀಡಿದರೆ ಅರಬ್ಬಿ ಸಮುದ್ರ, ಸುತ್ತಲಿನ ಪ್ರಾಕೃತಿಕ ಸೊಬಗು ಸವಿಯುವ ಜೊತೆಗೆ ಭಾರತೀಯ ನೌಕಾದಳದ ‘ಐಎನ್‌ಎಸ್ ಚಪಲ್ ಯುದ್ಧನೌಕೆ‘, ‘ಟುಪಲೇವ್ ಯುದ್ಧವಿಮಾನ’ ಕಣ್ತುಂಬಿಕೊಳ್ಳಬಹುದು. ಯುದ್ಧನೌಕೆಯ ಅಕ್ಕಪಕ್ಕದಲ್ಲಿರುವ, ಐದೂವರೆ ದಶಕದ ಹಿಂದೆ ಯುದ್ಧದಲ್ಲಿ ಬಳಸಿದ್ದ ಕ್ಷಿಪಣಿ, ಟಾರ್ಪಿಡೊ (ನೌಕಾ ಸ್ಫೋಟಕ) ಪ್ರವಾಸಿಗರ ಗಮನಕ್ಕೆ ಹೋಗುವುದು ಕಡಿಮೆ. ಆದರೆ, ಕೆಲ ದಿನಗಳಿಂದ ಇವುಗಳತ್ತ ಪ್ರವಾಸಿಗರ ದೃಷ್ಟಿ ನೆಟ್ಟಿದೆ!