IPL 2026: 9.20 ಕೋಟಿ ಕೊಟ್ಟು ಬಾಂಗ್ಲಾದೇಶಿ ಕ್ರಿಕೆಟರ್ ಖರೀದಿ: ಶಾರುಖ್ ಖಾನ್ ವಿರುದ್ಧ ಜಗದ್ಗುರು ರಾಮಭದ್ರಾಚಾರ್ಯ ಕಿಡಿ
ನವದೆಹಲಿ: ಐಪಿಎಲ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ನೆರೆಯ ಬಾಂಗ್ಲಾದೇಶದ ಆಟಗಾರನನ್ನು ಖರೀದಿಸಿರುವ ಬಾಲಿವುಡ್ ನಟ ಶಾರುಖ್ ಖಾನ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಐಪಿಎಲ್ 2026ಕ್ಕಾಗಿ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಶಾರುಖ್ ಖಾನ್ ಅವರು 9.20 ಕೋಟಿ ಕೊಟ್ಟು ಖರೀದಿಸಿದ್ದಾರೆ.