ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಭಯ ಹುಟ್ಟಿಸಿದ್ದ ಮಿಗ್-21 ಉಡುಪಿಯಲ್ಲಿ ಲ್ಯಾಂಡ್!
ಉಡುಪಿ: ಈ ಮಿಗ್-21 ಶ್ರೇಣಿಯ ಯುದ್ಧ ವಿಮಾನವನ್ನ (MiG-21 fighter jet) ಸೋವಿಯತ್ ಒಕ್ಕೂಟವು (Soviet Union) ವಿನ್ಯಾಸಗೊಳಿಸಿತ್ತು. 1963ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿ 2025 ಸೆಪ್ಟೆಂಬರ್ ತನಕ, 62 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಶತ್ರುಗಳ ವಿಮಾನಗಳನ್ನು ತಡೆಯಲು, ಭೂಮಿಯಲ್ಲಿನ ಗುರಿಗಳ ಮೇಲೆ ದಾಳಿ ನಡೆಸಲು ಇದನ್ನು ಬಳಸಲಾಗುತ್ತಿತ್ತು. ಇದು ಶಬ್ದದ ವೇಗದ (Speed of Sound) ಎರಡು ಪಟ್ಟು ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
15 ಜನ್ರ ತಂಡದಿಂದ ಫ್ಲೈಟ್ ಜೋಡಣೆ
ಕಾರ್ಗಿಲ್ ಯುದ್ಧ ಸೇರಿದಂತೆ ಬಹುತೇಕ ಎಲ್ಲ ಯುದ್ದಗಳಲ್ಲೂ ಯುದ್ಧ ವಿಮಾನ ಭಾಗವಹಿಸಿದೆ. ಜತೆಗೆ 2019ರಲ್ಲಿ ಬಾಲಾಕೋಟ್ ಬಳಿ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದು ಕೂಡ ಇದೆ ವಿಮಾನ. ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರ ಹುಟ್ಟೂರಾದ ಕೋಟಾದಲ್ಲಿ, ಕರಾವಳಿಯ ಪ್ರಥಮ ಶಾಶ್ವತ ಯುದ್ಧ ವಿಮಾನ ಪ್ರದರ್ಶನ ತಾಣ ರೂಪುಗೊಂಡಿದೆ. ಇದೀಗ ಈ ಮಿಗ್-21 ಯುದ್ಧ ವಿಮಾನವನ್ನ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.