ಕುಕ್ಕೆ ಸುಬ್ರಹ್ಮಣ್ಯ ಸಹಿತ ಆದಾಯದಲ್ಲಿ ರಾಜ್ಯದ ಟಾಪ್ 10 ಶ್ರೀಮಂತ ದೇವಾಲಯಗಳಿವು
ಮಂಡ್ಯ: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಆದಾಯ ಗಳಿಕೆಯಲ್ಲಿ ‘ಅತ್ಯಂತ ಶ್ರೀಮಂತ’ ಎನಿಸಿದೆ. 2022–23ರಲ್ಲಿ ₹123 ಕೋಟಿ, 2023–24ರಲ್ಲಿ ₹146 ಕೋಟಿ, 2024–25ರಲ್ಲಿ ₹155 ಕೋಟಿ ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದೆ.