ಫ್ರೀ ಎಣ್ಣೆ ಕೊಡದಿದ್ದಕ್ಕೆ ಬಾರ್ ಗೆ ಬೆಂಕಿಯಿಟ್ಟ ಪುಂಡರು! ಓನರ್ ಕಾರಿಗೂ ಬೆಂಕಿ ಹಚ್ಚಿ ಪರಾರಿ
ಮಂಡ್ಯ: ಎಣ್ಣೆ ಕೊಡದಿದ್ದಕ್ಕೆ ಪುಂಡರು ಬಾರ್ ಗೆ ಬೆಂಕಿ ಹಚ್ಚಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಗಸರಹಳ್ಳಿ ಗೇಟ್ ಸಮೀಪ, ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಪುಂಡರು ಬಾರ್‌ಗೆ ಬೆಂಕಿ ಹಚ್ಚಿದ್ದು, ಪುಂಡರ ಈ ವರ್ತನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಅಗಸರಹಳ್ಳಿ ಗ್ರಾಮದ ಪರಮೇಶ್ ಎಂಬುವರಿಗೆ ಸೇರಿದ ‘ಈಗಲ್ ಬಾರ್ ಅಂಡ್ ರೆಸ್ಟೋರೆಂಟ್’ ನಲ್ಲಿ ಈ ದುರ್ಘಟನೆ ನಡೆದಿದೆ.