ಅಪರೂಪದ ಪಾರ್ಟಿ, ಯಾವತ್ತೂ ಒಂದ್ಸಲ ಡ್ರಿಂಕ್, 28ರ ಯುವಕನ ಲಿವರ್ ವರದಿಗೆ ವೈದ್ಯರೇ ದಂಗು
ವಡೋದರ (ಜ.03) ನಾವು ಕುಡುಕರಲ್ಲ, ಅಲ್ಪ ಸ್ವಲ್ಪ ಕುಡಿಯೋರು ಎಂದು ಗಜ ಗಾಂಭೀರ್ಯದಿಂದ ಓಡಾಡುವ ಮಂದಿ 28ರ ಯುವಕನ ಲಿವರ್ ಸ್ಕ್ಯಾನ್ ರಿಪೋರ್ಟ್ ಒಂದು ಬಾರಿ ಕಣ್ಣಾಡಿಸಿ. ನಾವು ದಿನಾ ಕುಡಿಯಲ್ಲ, ಯಾವತ್ತೂ ಒಂದು ದಿನ, ಅದು ಪಾರ್ಟಿ, ಗೆಳೆಯರು ಸಿಕ್ಕಾಗ ಮಾತ್ರ, ಅದು ಹೆಚ್ಚಿಲ್ಲ. ಇನ್ನು ಸೈಡ್ಸ್, ನಾನ್ ವೆಚ್, ಫುಡ್, ನೀರು ಎಲ್ಲಾ ಸರಿಯಾಗಿ ತಗೋತೇವೆ. ಹೀಗಾಗಿ ಆರೋಗ್ಯದ ಬಗ್ಗೆ, ಲಿವರ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆಯೂ ಇಲ್ಲ ಎಂದುಕೊಂಡರೆ ತಪ್ಪು. ಇದೀಗ ವೈದ್ಯರೊಬ್ಬರು 28 ವರ್ಷದ ಯುವಕ ಲಿವರ್ ವರದಿ ಬಹರಿಂಗಪಡಿಸಿದ್ದಾರೆ.