... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ನಾಲ್ಕು ವರ್ಷದ ಪಯಣದ ಬಳಿಕ ಜೊನಾಥನ್‌ ಟ್ರಾಟ್‌ ಕೋಚ್‌ ಅಭಿಯಾನ ಅಂತ್ಯ

Afghanistan Cricket: ನಾಲ್ಕು ವರ್ಷದ ಪಯಣದ ಬಳಿಕ ಜೊನಾಥನ್‌ ಟ್ರಾಟ್‌ ಕೋಚ್‌ ಅಭಿಯಾನ ಅಂತ್ಯ

ಐಸಿಸಿ ಟಿ20 ವಿಶ್ವಕಪ್‌ ನಲ್ಲಿ ಅಫ್ಘಾನಿಸ್ತಾನದ ಅಭಿಯಾನ ಅಂತ್ಯವಾಗಿದೆ. ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಈ ಮೂಲಕ ಸೂಪರ್‌ 8 ಗೆ ಪ್ರವೇಶ ಪಡೆಯದೆ ಗುಂಪು ಹಂತದಲ್ಲೇ ನಿರ್ಗಮಿಸಿದೆ. ಈ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಅಫ್ಘಾನ್‌ ತಂಡದ ಕೋಚ್‌ ಆಗಿದ್ದ ಜೊನಾಥನ್‌ ಟ್ರಾಟ್‌ (Jonathan Trott) ಅವರ ಅಧಿಕಾರವಧಿ ಅಂತ್ಯವಾಗಿದೆ. 44 ವರ್ಷದ ಟ್ರಾಟ್ ವಿಶ್ವ ಕ್ರಿಕಟ್‌ ನ ಅತ್ಯಂತ ಪ್ರಭಾವಿ ಕೋಚ್‌ ಗಳಲ್ಲಿ ಒಬ್ಬರಾಗಿ ಮೂಡಿಬಂದವರು. ಅಫ್ಘಾನಿಸ್ತಾನ ಗುರುವಾರ ತಮ್ಮ ಅಂತಿಮ ಗುಂಪು ಪಂದ್ಯದಲ್ಲಿ ಕೆನಡಾ ವಿರುದ್ಧ 82 ರನ್‌ಗಳ ಜಯದೊಂದಿಗೆ ತಮ್ಮ ಅಭಿಯಾನವನ್ನು ಕೊನೆಗೊಳಿಸಿತು. 

ವೈಟ್‌ ಬಾಲ್ ಸ್ವರೂಪಗಳಲ್ಲಿ ಗಂಭೀರ ಸ್ಪರ್ಧಿಯಾಗಿ ತಂಡವನ್ನು ಬೆಳೆಸಿರುವ ಹಿಂದೆ ಜೊನಾಥನ್‌ ಟ್ರಾಟ್ ಮಹತ್ವದ ವ್ಯಕ್ತಿಯಾಗಿದ್ದಾರೆ. ಟ್ರಾಟ್ ನೇತೃತ್ವದಲ್ಲಿ, ಅಫ್ಘಾನಿಸ್ತಾನ 2023 ರ ಏಕದಿನ ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಹಂತಕ್ಕೆ ತಲುಪಿತ್ತು, 2024 ರ ಟಿ 20 ವಿಶ್ವಕಪ್‌ನ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿತ್ತು. "ಬಹುಶಃ ಸಮಯ ಸರಿಯಾಗಿದೆ, ಬಹುಶಃ ಇಲ್ಲದಿರಬಹುದು. ನನಗೆ ಗೊತ್ತಿಲ್ಲ, ಆದರೆ ಭವಿಷ್ಯದಲ್ಲಿ ಎಲ್ಲರಿಗೂ ಶುಭ ಹಾರೈಸುತ್ತೇನೆ. ಅವಕಾಶ ಸಿಕ್ಕಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನಗೆ ಆಕಸ್ಮಿಕವಾಗಿ ಅವಕಾಶ ಸಿಕ್ಕಿತು, ನಿಜವಾಗಿಯೂ. ಗ್ರಹಾಂ ಥೋರ್ಪ್ ತರಬೇತುದಾರರಾಗಬೇಕಿತ್ತು ಮತ್ತು ದುರದೃಷ್ಟವಶಾತ್ ಅವರು ಆ ಪಾತ್ರವನ್ನು ವಹಿಸಿಕೊಳ್ಳಲು ಸಾಧ್ಯವಾಗಲಿಲ್ಲ," ಎಂದು ಅವರು ಪಂದ್ಯದ ನಂತರದ ಸಂವಾದದಲ್ಲಿ ಹೇಳಿದರು. “ನಂತರ ನನಗೆ ಆ ಕೆಲಸ ಸಿಕ್ಕಿತು ಮತ್ತು ಅದನ್ನು ಎರಡೂ ಕೈಗಳಿಂದ ಸ್ವೀಕರಿಸಿದೆ. ಹಾಗಾಗಿ ನಾನು ಆಕಸ್ಮಿಕವಾಗಿ ಇಲ್ಲಿದ್ದೇನೆ. ನಾನು ನನ್ನ ಎಲ್ಲವನ್ನೂ ನೀಡಿದೆ. ಆಟದ ಬಗ್ಗೆ ನನಗೆ ಇರುವ ಪ್ರೀತಿ ಮತ್ತು ಆಟಗಾರರಾಗಿ ಮತ್ತು ಜನರಾಗಿ ನಾನು ಅವರ ಬಗ್ಗೆ ಹೊಂದಿರುವ ಕಾಳಜಿಯನ್ನು ಆಟಗಾರರು ನೋಡಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು. ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಟ್ರಾಟ್ ಇಂಗ್ಲೆಂಡ್‌ ಪರವಾಗಿ ಅಡಿದ್ದರು. ಕಳೆದ ಕೆಲವು ದಿನಗಳಿಂದ ಅಥವಾ ಪಂದ್ಯಾವಳಿಯ ಉದ್ದಕ್ಕೂ ಅವರು ಭಾವನಾತ್ಮಕವಾಗಿದ್ದಾರೆಯೇ ಎಂದು ಕೇಳಿದಾಗ, ಪಂದ್ಯಾವಳಿಯಲ್ಲಿನ ಮಿಶ್ರ ಫಲಿತಾಂಶಗಳು ಅವರ ಮನಸ್ಸಿನಲ್ಲಿನ ಗೊಂದಲ ಹೆಚ್ಚಿಸುವುದರೊಂದಿಗೆ ಭಾವನೆಗಳು ಭಾರವಾಗಿವೆ ಎಂದು ಟ್ರಾಟ್ ಒಪ್ಪಿಕೊಂಡರು.

Source : Udayavani

1 hour ago

Home Flash News