... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಒಳ್ಳೆ ಸ್ಪಿನ್ನರ್​ನಂತೆ ಬೌಲಿಂಗ್ ಮಾಡ್ತಿದ್ದೀಯ… ಆಟಗಾರರ ನಡುವೆ ಮಾತಿನ ಚಕಮಕಿ

ಒಳ್ಳೆ ಸ್ಪಿನ್ನರ್​ನಂತೆ ಬೌಲಿಂಗ್ ಮಾಡ್ತಿದ್ದೀಯ… ಆಟಗಾರರ ನಡುವೆ ಮಾತಿನ ಚಕಮಕಿ

Ranji Trophy Final 2026: ರಣಜಿ ಟ್ರೋಫಿ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಮುಂಬೈ ತಂಡ. ಮುಂಬೈ 42 ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ. ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಕರ್ನಾಟಕ. ಕರುನಾಡ ಪಡೆ ಈವರೆಗೆ 8 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಆದರೆ 9ನೇ ಬಾರಿ ಟ್ರೋಫಿ ಎತ್ತಿ ಹಿಡಿಯುವ ಕನಸು ಬಹುತೇಕ ಕಮರಿದೆ. ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ಆಟಗಾರರ ನಡುವೆ ಮಾತಿನ ಚಕಮಕಿ ಮುಂದುವರೆದಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ ವೇಳೆ ಪರಸ್ ಡೋಗ್ರಾ ಹಾಗೂ ಕೆವಿ ಅನೀಶ್ ಮೈದಾನದಲ್ಲೇ ಕಿತ್ತಾಡಿಕೊಂಡಿದ್ದರು. 

ಇದೀಗ ಕರ್ನಾಟಕ ವೇಗಿ ವೈಶಾಕ್ ವಿಜಯಕುಮಾರ್ ಹಾಗೂ ಜಮ್ಮು-ಕಾಶ್ಮೀರ ತಂಡದ ಆರಂಭಿಕ ದಾಂಡಿಗ ಖಮ್ರಾನ್ ಇಕ್ಬಾಲ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ನಾಲ್ಕನೇ ದಿನದಾಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಎರಡನೇ ಇನ್ನಿಂಗ್ಸ್‌ನ 49ನೇ ಓವರ್‌ನಲ್ಲಿ ವೈಶಾಕ್ ವಿಜಯಕುಮಾರ್ ಎಸೆದ ಬೌನ್ಸರ್ ಎಸೆದಿದ್ದರು. ಈ ಎಸೆತಕ್ಕೆ ಪ್ರತ್ಯುತ್ತರ ನೀಡಲು ಖಮ್ರಾನ್​ಗೆ ಸಾಧ್ಯವಾಗಿರಲಿಲ್ಲ. ಈ ವೇಳೆ ವೈಶಾಕ್ ಸ್ಟ್ರೈಕರ್​ನತ್ತ ಗುರಾಯಿಸುವ ಮೂಲಕ ಕೆಣಕಿದ್ದರು. ಈ ವೇಳೆ ಖಮ್ರಾನ್ ಇಕ್ಬಾಲ್ “ಹೋಗಿ ಬೌಲಿಂಗ್ ಮಾಡು” ಎಂದು ಪ್ರತ್ಯುತ್ತರ ನೀಡಿದ್ದಾರೆ. ಇದಾಗ್ಯೂ ವೈಶಾಕ್ ವಿಜಯಕುಮಾರ್ ಗುರಾಯಿಸುವಿಕೆ ಮುಂದುವರೆಸಿದ್ದರು. 

ಈ ವೇಳೆ ಖಮ್ರಾನ್ ಇಕ್ಬಾಲ್, ನೀನು ಒಳ್ಳೆ ಸ್ಪಿನ್ನರ್​ನಂತೆ ಬೌಲಿಂಗ್ ಮಾಡ್ತಿದ್ದೀಯ, ಅಷ್ಟೊಂದು ನಿಧಾನವಾಗಿದೆ ಎಂದು ಲೇವಡಿ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ವೈಶಾಕ್ ಮತ್ತಷ್ಟು ವೇಗದಲ್ಲಿ ಚೆಂಡೆಸೆದರು ಆದರೆ ಈ ಎಸೆತದಲ್ಲಿ ಇಕ್ಬಾಲ್ ಅದ್ಭುತವಾಗಿ ಸಿಕ್ಸರ್‌ಗೆ ಅಟ್ಟುವ ಮೂಲಕ ತಿರುಗೇಟು ನೀಡಿದರು. ಇದಾದ ಬಳಿಕ ಕೂಡ ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರೆಯಿತು. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಅಂಪೈರ್ ರೋಹನ್ ಪಂಡಿತ್ ಅವರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು. ಇನ್ನು ಈ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡವು ಗೆಲುವಿನತ್ತ ದಾಪುಗಾಲಿಟ್ಟಿದೆ. ಮೊದಲ ಇನಿಂಗ್ಸ್​ನಲ್ಲಿ 584 ರನ್​ ಪೇರಿಸಿದ್ದ ಕಾಶ್ಮೀರಿ ಪಡೆ ಕರ್ನಾಟಕ ತಂಡವನ್ನು ಕೇವಲ 293 ರನ್​ಗಳಿಗೆ ಆಲೌಟ್ ಮಾಡಿದ್ದರು. ಈ ಮೂಲಕ ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 291 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

Source : TV9 Kannada

3 days ago

Home Flash News