ರಾಜ್ಯಸಭಾ ಚುನಾವಣೆ: BJP ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಬಿಹಾರದಿಂದ ಕಣಕ್ಕೆ
ನವದೆಹಲಿ: ಮುಂಬರುವ ರಾಜ್ಯಸಭಾ ಚುನಾವಣೆಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಬಿಹಾರದಿಂದ ಸ್ಪರ್ಧಿಸಲಿದ್ದಾರೆ. ಪಶ್ಚಿಮ ಬಂಗಾಳದಿಂದ ರಾಹುಲ್ ಸಿನ್ಹಾ ಮತ್ತು ಛತ್ತೀಸಗಢದಿಂದ ಲಕ್ಷ್ಮಿ ವರ್ಮಾ ಅವರನ್ನು ಕಣಕ್ಕಿಳಿಸಲಾಗಿದೆ. ಅಸ್ಸಾಂನ ಸಚಿವ ಜೋಗೆನ್ ಮೋಹನ್ ಮತ್ತು ಶಾಸಕ ತೇರಶ್ ಗೋವಲ್ಲ ಅವರಿಗೂ ಸಂಸತ್ತಿನ ಮೇಲ್ಮನೆ ಟಿಕೆಟ್ ನೀಡಲಾಗಿದೆ.
ಒಡಿಶಾದಿಂದ ಮನಮೋಹನ್ ಸಮಲ್ ಮತ್ತು ರಾಜ್ಯಸಭಾ ಸಂಸದ ಸುಜಿತ್ ಕುಮಾರ್ ಅವರನ್ನು ಅಭ್ಯರ್ಥಿಗಳಾಗಿ ನಾಮನಿರ್ದೇಶನ ಮಾಡಲಾಗಿದೆ. ಬಿಹಾರದಿಂದ ಶಿವೇಶ್ ಕುಮಾರ್ ಕಣಕ್ಕೆ ಇಳಿಯಲಿದ್ದಾರೆ. ಹರಿಯಾಣದಿಂದ ಮಾಜಿ ಲೋಕಸಭಾ ಸಂಸದ ಸಂಜಯ್ ಭಾಟಿಯಾ ಕಣಕ್ಕಿಳಿಯಲಿದ್ದಾರೆ.
ಅಭ್ಯರ್ಥಿಗಳ ಹೆಸರುಗಳನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿ ಅನುಮೋದಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.