ವೃದ್ಧರು, ವಿಧವೆಯರಿಗೆ ₹2 ಸಾವಿರ: ಸ್ಟಾಲಿನ್
ಚೆನ್ನೈ: ಸಮಾಜದಲ್ಲಿನ ದುರ್ಬಲ ವರ್ಗದ ಜನರ 37.79 ಲಕ್ಷ ಬ್ಯಾಂಕ್ ಖಾತೆಗಳಿಗೆ ತಲಾ ₹2 ಸಾವಿರ ಜಮೆ ಮಾಡಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಂಗಳವಾರ ಘೋಷಿಸಿದರು. ವೃದ್ಧರು, ವಿಧವೆಯರು, ವಯಸ್ಸಾದ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಅಂಗವಿಕಲರಿಗೆ ಹೆಚ್ಚುವರಿ ಬೆಂಬಲ ನೀಡಬೇಕು ಎಂಬ ಮನವಿಗೆ, ಈಗಾಗಲೇ ಅವರು ಪಡೆಯುತ್ತಿರುವ ಮಾಸಾಶನ ಹೊರತುಪಡಿಸಿ, ಸರ್ಕಾರವು ಈ ವಿಶೇಷ ನೆರವು ನೀಡಲಿದೆ ಎಂದಿದ್ದಾರೆ. ಸರ್ಕಾರದ ಈ ಧನ ಸಹಾಯವು ದುರ್ಬಲ ವರ್ಗದ ಜನರ ಬದುಕಿಗೆ ಆಸರೆ ಆಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.