INDvsENG: ಬ್ಯಾಟರ್‌ಗಳ ಅಬ್ಬರಕ್ಕೆ ಸಾಕ್ಷಿಯಾದ ಸೆಮಿಫೈನಲ್ ಸಮರ: ಫೈನಲ್‌ಗೇರಿದ ಭಾರತ
ಐಸಿಸಿ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬ್ಯಾಟರ್‌ಗಳು ಆರ್ಭಟಿಸಿದ್ದಾರೆ.
ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡರು. ಆದರೆ ಬೌಲರ್‌ಗಳು ಟೀಮ್ ಇಂಡಿಯಾದ ಭರ್ಜರಿ ಆಟಕ್ಕೆ ದುಬಾರಿ ಆದರು.
ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಲಯ ಕಂಡುಕೊಂಡ ಸಂಜು ಸ್ಯಾಮ್ಸನ್ ಸೆಮಿಫೈನಲ್‌ನಲ್ಲೂ ಹಿಂದಿನ ಪಂದ್ಯದ ರೀತಿಯಲ್ಲೇ ಸ್ಫೋಟಕವಾಗಿ ಬ್ಯಾಟ್ ಬೀಸಿದರು.
ಮಹತ್ವದ ಪಂದ್ಯದಲ್ಲೂ ಅಭಿಷೇಕ್ ಶರ್ಮಾ (9 ರನ್) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ವಿಲ್ ಜ್ಯಾಕ್ಸ್ ಎಸೆತದಲ್ಲಿ ಲೂಸ್ ಶಾಟ್ ಹೊಡೆದು ಸಾಲ್ಟ್ ಅವರಿಗೆ ಕ್ಯಾಚ್ ಕೊಟ್ಟು ಔಟ್ ಆದರು.
ಇಶಾನ್ ಕಿಶನ್ 18 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 39 ರನ್ ಗಳಿಸಿ ರಶೀದ್ ಅವರ ಎಸೆತಕ್ಕೆ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು.
ಇನ್ನೊಂದು ಕಡೆ ಬೌಲರ್ ಯಾರೇ ಇದ್ರು ಸಂಜು ಸ್ಯಾಮ್ಸನ್ ಕ್ಯಾರೇ ಮಾಡದೆ ಸಿಕ್ಸರ್, ಬೌಂಡರಿಗಳ ಸುರಿಮಳೆ ಗೈದರು. ಆರಂಭದಲ್ಲಿ 15 ರನ್‌ನಲ್ಲಿ ಸಂಜು ಅವರ ಸುಲಭ ಕ್ಯಾಚ್‌ನ್ನು ಇಂಗ್ಲೆಂಡ್ ಕ್ಯಾಪ್ಟನ್ ಬ್ರೂಕ್ ಕೈಚೆಲ್ಲಿದ್ದು, ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಸಂಜು ಸ್ಯಾಮ್ಸನ್ 42 ಎಸೆತದಲ್ಲಿ 8 ಬೌಂಡರಿ, 7 ಸಿಕ್ಸರ್ ಸಹಿತ 89 ರನ್‌ಗಳಿಸಿ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು. ವಿಲ್ ಜ್ಯಾಕ್ಸ್ ಎಸೆತದಲ್ಲಿ ಫಿಲ್ ಸಾಲ್ಟ್ ಅವರಿಗೆ ಕ್ಯಾಚ್ ಕೊಟ್ಟರು. ಶಿವಂ ದುಬೆ ಸ್ಪೋಟಕವಾಗಿ 43 ರನ್‌ಗಳಿಸಿ ರನೌಟ್ ಆದರು.
ಸೂರ್ಯಕುಮಾರ್ ಬರೀ 11 ರನ್‌ಗಳಿಸಿ ಔಟಾದರು. ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಅವರ ಬಿರುಸಿನ ಆಟದಿಂದ 20 ಓವರ್‌ನಲ್ಲಿ 7 ವಿಕೆಟ್ ಕಳೆದುಕೊಂಡು 253 ಬೃಹತ್ ಮೊತ್ತ ದಾಖಲಿಸಿತು. ದೊಡ್ಡ ಮೊತ್ತವನ್ನು ಚೇಸ್ ಮಾಡಲು ಮೈದಾನಕ್ಕಿಳಿದ ಇಂಗ್ಲೆಂಡ್ ಆರಂಭದಲ್ಲೇ ಫಿಲ್ ಸಾಲ್ಟ್ ಅವರನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಸಾಲ್ಟ್ 5 ರನ್ ಗಳಿಸಿ ಔಟಾದರು. ವಿಕೆಟ್ ಹೋದ್ರೂ ಭರವಸೆಯ ಆಟಗಾರ ಜಾಸ್ ಬಟ್ಲರ್ ಫೋರ್ , ಸಿಕ್ಸರ್ ಮೂಲಕ ಅಬ್ಬರಿಸಿದರು. 25 ರನ್ ಗಳಿಸಿ ವರುಣ್ ಚಕ್ರವರ್ತಿ ಅವರಿಗೆ ವಿಕೆಟ್ ಒಪ್ಪಿಸಿದರು. ಕ್ಯಾಪ್ಟನ್ ಹ್ಯಾರಿ ಬ್ರೂಕ್ 7 ರನ್ ಗಳಿಸಿ ಜಸ್ಪ್ರೀತ್ ಬುಮ್ರಾ ಅವರಿಗೆ ವಿಕೆಟ್ ಒಪ್ಪಿಸಿದರು. ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿದ ಟಾಮ್ ಬ್ಯಾಂಟನ್ ಅಕ್ಷರ್ ಅವರ ಎಸೆತಕ್ಕೆ 17 ರನ್ ಗಳಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.