ಟಿ20 ವಿಶ್ವಕಪ್ ಫೈನಲ್; ಅಹಮದಾಬಾದ್‌ನಲ್ಲಿ 10 ಸಾವಿರದಿಂದ ಮುಕ್ಕಾಲು ಲಕ್ಷಕ್ಕೇರಿದ ರೂಮ್ ಬೆಲೆ
T20 World Cup Final: 2026ರ ಟಿ20 ವಿಶ್ವಕಪ್ ಫೈನಲ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ತಂಡ ಫೈನಲ್ ಪ್ರವೇಶಿಸಿದ ನಂತರ, ಕ್ರಿಕೆಟ್ ಅಭಿಮಾನಿಗಳು ಅಹಮದಾಬಾದ್‌ಗೆ ಧಾವಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಹೋಟೆಲ್ ಬಾಡಿಗೆಗಳು ಐದು ಪಟ್ಟು ಹೆಚ್ಚಾಗಿ, ರೂ 10,000ದಿಂದ ರೂ 75,000ಕ್ಕೆ ಏರಿವೆ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲೂ ಇದೇ ರೀತಿ ದರ ಹೆಚ್ಚಳವಾಗಿತ್ತು.
2023 ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಟೀಂ ಇಂಡಿಯಾ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಮತ್ತೊಂದು ಐಸಿಸಿ ಈವೆಂಟ್ನ ಫೈನಲ್ ಆಡಲು ಸಜ್ಜಾಗಿದೆ. ಎಲ್ಲರಿಗೂ ತಿಳಿದಿರುವಂತೆ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ 2026 ರ ಟಿ20 ವಿಶ್ವಕಪ್ ಫೈನಲ್ (T20 World Cup Final) ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣ ಫೈನಲ್ ಕಾಳಗಕ್ಕೆ ತಯಾರಾಗಿ ನಿಂತಿದೆ. ಅದರಲ್ಲೂ ಆತಿಥೇಯ ಭಾರತ ಫೈನಲ್ ಪ್ರವೇಶಿಸಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದಂತ್ತಾಗಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ದಂಡು ಅಹಮದಾಬಾದ್‌ನ ಪ್ರಯಾಣ ಬೆಳೆಸಲು ಶುರುಮಾಡಿದೆ. ಇದರ ಲಾಭ ಪಡೆಯಲು ಮುಂದಾಗಿರುವ ಅಹಮದಾಬಾದ್‌ನ ಹೋಟೆಲ್ಗಳು ರೂಮ್ ಬಾಡಿಗೆಯನ್ನು ಐದು ಪಟ್ಟು ಹೆಚ್ಚಳ ಮಾಡಿವೆ.