... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಇರಾನ್ ಆಯ್ತು, ವೆನೆಜುವೆಲಾ ಆಯ್ತು! ಟ್ರಂಪ್​ ನೆಕ್ಸ್ಟ್ ಟಾರ್ಗೆಟ್​ ಯಾವ ದೇಶ ಗೊತ್ತಾ?

Donald Trump: ಇರಾನ್ ಆಯ್ತು, ವೆನೆಜುವೆಲಾ ಆಯ್ತು! ಟ್ರಂಪ್​ ನೆಕ್ಸ್ಟ್ ಟಾರ್ಗೆಟ್​ ಯಾವ ದೇಶ ಗೊತ್ತಾ?

ವಾಷಿಂಗ್ಟನ್​ (ಅಮೆರಿಕ): ಜಿಯೋ ಪಾಲಿಟಿಕ್ಸ್​ನ ರಣಾಂಗಣದಲ್ಲಿ ಅಮೆರಿಕದ (America) ದಿಗ್ಬಂಧನಗಳು ಮತ್ತು ರಾಜತಾಂತ್ರಿಕ ಒತ್ತಡಗಳು ಹೊಸದೇನಲ್ಲ. ಕೆಲ ದಿನಗಳ ಹಿಂದೆ ವೆನಿಜುವೆಲಾದ (Venezuela) ಅಧ್ಯಕ್ಷ ನಿಕೋಲಸ್ ಮಡುರೊನನ್ನು ರಾತ್ರೋ ರಾತ್ರಿ ಅವನ ದೇಶದಿಂದಲೇ ಕಿಡ್ನ್ಯಾಪ್​ ಮಾಡಿತ್ತು. ಇದಾದ ಕೆಲವೇ ದಿನಗಳಲ್ಲಿ ಇಸ್ರೇಲ್​ನೊಂದಿಗೆ (Israel) ಜೊತೆಗೂಡಿ ಇರಾನ್​ (Iran) ಮೇಲೆ ದಾಳಿ ಮಾಡಿತ್ತು. ಈ ವೇಳೆ, ಇರಾನ್‌ನ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಮೇನಿಯನ್ನ ತನ್ನ ಮೊದಲ ದಾಳಿಯಲ್ಲೇ ಹತ್ಯೆ ಮಾಡಿತ್ತು. ಇದಾದ ನಂತರ ಎರಡು ದೇಶಗಳ ನಡುವಿನ ಯುದ್ಧವು ಮೂರನೇ ವಿಶ್ವ ಯುದ್ಧದತ್ತ ತಗೆದುಕೊಂಡು ಹೋಗುತ್ತಿದೆ ಎನ್ನಲಾಗಿದೆ. ಇದರ ನಡುವೆ, ಅಮೆರಿಕ ಅಧ್ಯಕ್ಷ (America President) ಡೊನಾಲ್ಡ್ ಟ್ರಂಪ್ (Donald Trump) ತನ್ನ ಮುಂದಿನ ಗುರಿ ಯಾರು ಎಂಬುದರ ಕುರಿತು ಸಹ ಮಾತನಾಡಿದ್ದಾರೆ.

 ಆ ಕುರಿತ ವರದಿ ಇಲ್ಲಿದೆ: ಈಗಾಗಲೇ ಇರಾನ್‌ನ ಪರಮಾಣು ಹಠಮಾರಿ ಧೋರಣೆ ಮತ್ತು ವೆನೆಜುವೆಲಾದ ರಾಜಕೀಯ ಅಸ್ಥಿರತೆಯನ್ನು ತನ್ನ ಲಾಭಕ್ಕೆ ಬಳಸಿಕೊಂಡ ಅಲ್ಲಿನ ನಾಯಕರ ಮೇಲೆ ದಾಳಿ ಮಾಡಿದ್ದ ಅಮೆರಿಕ, ಈಗ ತನ್ನ ಹಳೆಯ ಶತ್ರು ಕ್ಯೂಬಾದತ್ತ ತನ್ನ ಮುಂದಿನ ಚಿತ್ತವನ್ನ ಹರಿಸಿದೆ. ಈಗಾಗಲೇ ಇರಾನ್‌ನ ಪರಮಾಣು ಹಠಮಾರಿ ಧೋರಣೆ ಮತ್ತು ವೆನೆಜುವೆಲಾದ ರಾಜಕೀಯ ಅಸ್ಥಿರತೆಯನ್ನು ತನ್ನ ಲಾಭಕ್ಕೆ ಬಳಸಿಕೊಂಡ ಅಲ್ಲಿನ ನಾಯಕರ ಮೇಲೆ ದಾಳಿ ಮಾಡಿದ್ದ ಅಮೆರಿಕ, ಈಗ ತನ್ನ ಹಳೆಯ ಶತ್ರು ಕ್ಯೂಬಾದತ್ತ ತನ್ನ ಮುಂದಿನ ಚಿತ್ತವನ್ನ ಹರಿಸಿದೆ.
ಟ್ರಂಪ್ ಅವರು ಕ್ಯೂಬಾದ ವಿರುದ್ಧ ಯಾವುದೇ ನಿರ್ದಿಷ್ಟ ಕ್ರಮಗಳನ್ನು ಅಧಿಕೃತವಾಗಿ ಘೋಷಿಸದಿದ್ದರೂ, ವಾಷಿಂಗ್ಟನ್‌ನ ನೀತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗುವ ಲಕ್ಷಣಗಳು ದಟ್ಟವಾಗಿವೆ. ಅದರಂತೆ, ಕ್ಯೂಬಾದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆ ಅಥವಾ ಅಧಿಕಾರ ಬದಲಾವಣೆಯ "ಆಟ"ವನ್ನು ಅಮೆರಿಕ ಆರಂಭಿಸುತ್ತದೆಯೇ ಎಂಬ ಚರ್ಚೆಗಳು ಶುರುವಾಗಿವೆ. ಮತ್ತೊಂದೆಡೆ, ಅಮೆರಿಕದಲ್ಲಿ ನೆಲೆಸಿರುವ ಕ್ಯೂಬನ್ ಮೂಲದ ಜನರೊಂದಿಗೆ ಅಲ್ಲಿನ ಸರ್ಕಾರವು ನಿಕಟ ಸಂಬಂಧ ಹೊಂದಲು ಬಯಸಿದೆ. "ಭವಿಷ್ಯದಲ್ಲಿ ಎರಡೂ ದೇಶಗಳ ನಡುವೆ ಹೆಚ್ಚಿನ ಸಂಪರ್ಕ ಸಾಧ್ಯವಿದೆ" ಎಂಬುದು ಟ್ರಂಪ್ ಅವರ ಆಶಯವಾಗಿದೆ.

Source : News18 Kannada

8 hours ago

Home Flash News