... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಮಹಿಳಾ ಸ್ಕೂಬಾ ಡೈವರ್‌ನ ಎಲ್ಲೆಂದರಲ್ಲಿ ಮುಟ್ಟಿ ಕಿರುಕುಳ ಕೊಟ್ಟ ತರಬೇತುದಾರ,

ಮಹಿಳಾ ಸ್ಕೂಬಾ ಡೈವರ್‌ನ ಎಲ್ಲೆಂದರಲ್ಲಿ ಮುಟ್ಟಿ ಕಿರುಕುಳ ಕೊಟ್ಟ ತರಬೇತುದಾರ, ವಿಡಿಯೋ ಬಹಿರಂಗ

ಈಜಿಪ್ಟ್ (ಮಾ.09) ಒಬ್ಬಂಟಿ ಯುವತಿಗೆ ಸ್ಕೂಬಾ ಡೈವಿಂಗ್ ವೇಳೆ ಲೈಂಗಿಕ ಕಿರುಕುಳ ಕೊಟ್ಟ ಘಟನೆ ನಡೆದಿದೆ. ನೀರಿನೊಳಗೆ ಸ್ಕೂಬ್ ಡೈವಿಂಗ್ ಮಾಡುತ್ತಿದ್ದ ವೇಳೆ ತರಬೇತು ದಾರು ಮಹಿಳೆಗೆ ಕಿರುಕುಳ ನೀಡಿದ್ದಾನೆ. ಆಕೆಯನ್ನು ಎಲ್ಲೆಂದರಲ್ಲಿ ಮುಟ್ಟಿದ್ದಾನೆ. ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಆತನಿಂದ ಬಿಡಿಸಿಕೊಳ್ಳಲು ಪ್ರವಾಸಿ ಯುವತಿ ಪ್ರಯತ್ನಿಸುತ್ತಿರುವ ವಿಡಿಯೋ ಬಹಿರಂಗವಾಗಿದೆ. ಯುವತಿಯೇ ಈ ವಿಡಿಯೋ ಬಹಿರಂಗಪಡಿಸಿ ಕಿರುಕುಳ ಕುರಿತು ಸ್ಫೋಟಕ ಮಾಹಿತಿ ನೀಡಿದ್ದಾರೆ. ಈ ಘಟನೆ ಈಜಿಪ್ಟ್‌ನಲ್ಲಿ ನಡೆದಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 

ಸ್ಕೂಬಾ ಡೈವಿಂಗ್ ಕಲಿಯುತ್ತಿದ್ದ ಒಬ್ಬಂಟಿ ಯುವತಿಯನ್ನು ಟಾರ್ಗೆಟ್ ಮಾಡಿದ ಸ್ಕೂಬಾ ಡೈವರ್, ನೀರಿನೊಳಗೆ ಆಕೆ ಅಸಹಾಯಕರಾಗಿರುವಾಗಲೇ ಕಿರುಕುಳ ನೀಡುವ ಪ್ರಯತ್ನ ಮಾಡಲಾಗಿದೆ. ರಶಾ ಮೆಡಿಯನ್ ಎಂಬ ಯುವತಿ ತನಗಾದ ಕಹಿ ಘಟನೆಯನ್ನು ಹೇಳಿಕೊಂಡಿದ್ದಾಳೆ. ರಶಾ ಪ್ರಕಾರ, ಓಪನ್ ವಾಟರ್ ಸ್ಕೂಬಾ ಡೈವಿಂಗ್ ಕೋರ್ಸ್ ಕಲಿಯುವಾಗ ಈ ಘಟನೆ ನಡೆದಿದೆ. ತರಬೇತಿಯ ವೇಳೆ, ಸುರಕ್ಷತೆ ಅಥವಾ ಪಾಠಕ್ಕೆ ಸಂಬಂಧವಿಲ್ಲದ ರೀತಿಯಲ್ಲಿ ತರಬೇತುದಾರ ತನ್ನನ್ನು ಮುಟ್ಟಿದ್ದಾನೆ. ಇದರಿಂದ ತನಗೆ ಮುಜುಗರವಾಯಿತು ಎಂದು ಅವರು ಹೇಳಿದ್ದಾರೆ.

 ನೀರೊಳಗೇ ತರಬೇತುದಾರನ ಕೈ ತಳ್ಳಿದ ಯುವತಿ ವೈರಲ್ ಆಗಿರುವ ವಿಡಿಯೋದಲ್ಲಿ, ರಶಾ ನೀರೊಳಗೆ ತರಬೇತುದಾರನ ಜೊತೆ ಡೈವಿಂಗ್ ಅಭ್ಯಾಸ ಮಾಡುತ್ತಿರುವುದು ಕಾಣಿಸುತ್ತದೆ. ಈ ವೇಳೆ, ತರಬೇತುದಾರ ಆಕೆಗೆ ಗೈಡ್ ಮಾಡುವ ನೆಪದಲ್ಲಿ ಹಲವು ಬಾರಿ ಆಕೆಯ ದೇಹವನ್ನು ಮುಟ್ಟಿದ್ದಾನೆ. ತನ್ನ ಪೋಸ್ಟ್‌ನಲ್ಲಿ ರಶಾ, ತರಬೇತುದಾರನ ವರ್ತನೆಯನ್ನು ತಡೆಯಲು ಆತನ ಕೈಗಳನ್ನು ತಳ್ಳಿಹಾಕಿದೆ ಎಂದು ವಿವರಿಸಿದ್ದಾರೆ. ವಿಡಿಯೋದಲ್ಲಿ ತಾನು ಆತನ ಕೈಯನ್ನು ಪಕ್ಕಕ್ಕೆ ಸರಿಸಿ, ಮತ್ತೆ ಮುಟ್ಟದಂತೆ ಬೇರೆ ಕಡೆ ಇಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಅವರು ಬರೆದಿದ್ದಾರೆ.

Source : Asianet News

1 hour ago

Home Flash News