Bengaluru: ಬೆಂಗಳೂರು ಏರ್ಪೋರ್ಟ್ಗೆ ಬಂತು ಬೆತ್ತಲೆ ಫೋಟೋಗಳ ಪರ್ಸಲ್; ಇದೇನು ವಾಮಾಚಾರದ ಪೆಟ್ಟಿಗೆನಾ?
ಬೆಂಗಳೂರು : ವಾಮಾಚಾರ ಅಥವಾ ಬ್ಲ್ಯಾಕ್ ಮ್ಯಾಜಿಕ್ನಂತಹ ಕೆಲಸಗಳು ಹಳ್ಳಿಗಾಡು ಪ್ರದೇಶದಲ್ಲಿ ಹೆಚ್ಚು ಕಂಡು ಬರುತ್ತಿದ್ದವು. ಇದೀಗ ಬೆಂಗಳೂರು (Bengaluru) ಏರ್ಪೋರ್ಟ್ಗೂ ಬ್ಲ್ಯಾಕ್ ಮ್ಯಾಜಿಕ್ (Black magic) ಬಾಕ್ಸ್ ಒಂದು ಬಂದಿದೆ ಎನ್ನಲಾಗ್ತಿದೆ. ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ನಿತ್ಯ ಸಾವಿರಾರು ಜನರು ಓಡಾಡ್ತಾರೆ. ಈ ವಿಮಾನ ನಿಲ್ದಾಣದ ಅಂಚೆ ಕಚೇರಿಗೆ ಪಾರ್ಸೆಲ್ ಒಂದು ಬಂದಿದ್ದು, ಆ ಬಾಕ್ಸ್ನಲ್ಲಿರೋ ವಸ್ತುಗಳನ್ನ ಕಂಡು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
ಏರ್ಪೋರ್ಟ್ಗೆ ವಾಮಾಚಾರ ಶಂಕೆ?
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಸ್ತ್ರೀ, ಪುರುಷನ ನಗ್ನ ಫೋಟೋ, ಹೂವಿನ ಹಾರ ಸೇರಿ ಇನ್ನಿತರ ವಸ್ತುಗಳಿದ್ದ ಪಾರ್ಸೆಲ್‌ವೊಂದು ಬಂದಿದ್ದು, ವಾಮಾಚಾರ ಮಾಡಿದ್ರಾ ಎಂಬ ಪ್ರಶ್ನೆ ಮೂಡಿದೆ.
ಪರ್ಸಲ್ ಮೂಲಕ ಬಂದ ಬಾಕ್ಸ್ ಕಂಡು ಶಾಕ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೋಸ್ಟ್ ಆಫೀಸ್‌ಗೆ ಪಾರ್ಸೆಲ್‌ವೊಂದು ಬಂದಿದ್ದು, ತೆಗೆದು ನೋಡುತ್ತಿದ್ದಂತೆ ಅಧಿಕಾರಿಗಳು ಶಾಕ್ ಆಗಿದ್ದಾರೆ. ಏರ್ ಪೋರ್ಟ್ ಸಿಬ್ಬಂದಿಗಳ ಮೇಲೆ ವಾಮಾಚಾರ ನಡೀತಾ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೇ ಏರ್ಪೋರ್ಟ್ ಸಿಬ್ಬಂದಿಗೆ ಬಾಕ್ಸ್ ನಲ್ಲಿ ವಾಮಾಚಾರ ಹೋಲುವ ವಸ್ತುಗಳು ಇದ್ದವು ಎನ್ನಲಾಗ್ತಿದೆ.