ಸರ್ಕಾರದ ವಿರುದ್ಧ ಖಾದರ್ ಅಸಮಾಧಾನ.. ‘ಕಲಾಪ ನಡೆಸಲ್ಲ’ ಎಂದು ಎದ್ದು ಹೋದ ಸ್ಪೀಕರ್
ಬಜೆಟ್ ಕಲಾಪದ 7ನೇ ದಿನವಾದ ಇವತ್ತು ಕೂಡ ಕಲಾಪ ನಡೆಸಲು ವಿಧಾನಸಭೆಗೆ ಆಗಮಿಸಿದ್ದರು. ಆದರೆ ಸಚಿವರು, ಅಧಿಕಾರಿಗಳು ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಅನುಪಸ್ಥಿತರಿದ್ದರು. ಇದಕ್ಕೆ ಮುನಿಸಿಕೊಂಡು ಪೀಠದಿಂದ ಹೊರಹೋದರು. ಸ್ಪೀಕರ್ ಯು.ಟಿ.ಖಾದರ್ ಅವರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಲಾಪ ನಡೆಸದೇ ಪೀಠದಿಂದ ಎದ್ದು ಹೋಗಿದ್ದಾರೆ. ಸ್ಪೀಕರ್ಗೆ ಏನಾಯ್ತು..?
ಬಜೆಟ್ ಕಲಾಪದ 7 ನೇ ದಿನವಾದ ಇವತ್ತು ಕೂಡ ಕಲಾಪ ನಡೆಸಲು ವಿಧಾನಸಭೆಗೆ ಆಗಮಿಸಿದ್ದರು. ಆದರೆ ಸಚಿವರು, ಅಧಿಕಾರಿಗಳು ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಅನುಪಸ್ಥಿತರಿದ್ದರು.
ಇದಕ್ಕೆ ಮುನಿಸಿಕೊಂಡು ಪೀಠದಿಂದ ಹೊರಹೋದರು. ಸಚಿವರ ಕಾರ್ಯವೈಖರಿಗೆ ಸದನದಲ್ಲೇ ಗರಂ ಆದ ಸ್ಪೀಕರ್, 230ರ ಪ್ರಶ್ನೆಗಳಲ್ಲಿ 84 ಪ್ರಶ್ನೆಗಳಿಗೆ ಮಾತ್ರ ಸಚಿವರು ಉತ್ತರಿಸಿದ್ದಾರೆ. ಈ ಬಗ್ಗೆ ಮೊನ್ನೆಯೇ ಮಂತ್ರಿಗಳು ಮತ್ತು ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಲಾಗಿತ್ತು.
ಇದನ್ನೂ ಓದಿ: ಶ್ರೀಶೈಲಕ್ಕೆ ಹೊರಟಿದ್ದ ಭಕ್ತರ ಬೈಕ್ ಭೀಕರ ಅಪಘಾತ; ಕಾಡು ಹಂದಿ ಅಡ್ಡ ಬಂದು ದುರ್ಘಟನೆ
ಕಲಾಪ ನಡೆಸೋದು ನಡೆಸೋದು ಮಂತ್ರಿಗಳಿಗಾಗಿ ಅಲ್ಲ, ಶಾಸಕರ ಸಮಸ್ಯೆಗಳಿಗಾಗಿ. ಎಲ್ಲಾ ಪಕ್ಷಗಳ ಶಾಸಕರೂ ಪ್ರಶ್ನೆಗಳನ್ನ ಕೇಳುತ್ತಾರೆ.
ನಿಯಮಾವಳಿ ಪ್ರಕಾರ ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಲಿಲ್ಲ ಅಂದ್ರೆ ಹೇಗೆ? ಹಾಗಾದರೆ ಶಾಸಕರು ಸದನಕ್ಕೆ ಯಾಕೆ ಬರಬೇಕು ಹೇಳಿ? ಸರಿಯಾದ ಸಮಯಕ್ಕೆ ಮಂತ್ರಿಗಳು ಬರೋದಿಲ್ಲ. ಹಿಂದೆಯೂ ಈ ಬಗ್ಗೆ ಸೂಚನೆ ನೀಡಿದ್ದೇನೆ. ಈಗಾಗಲೇ ನಾಲ್ಕು ಭಾರಿ ಸೂಚನೆ ನೀಡಿದ್ದೇನೆ. ಇಂದು ಸೇರಿ ಐದನೇ ಬಾರಿಯೂ ಸುಧಾರಿಸದಿದ್ದರೆ ಏನು ಮಾಡೋದು? ಸುಧಾರಣೆ ಕಾಣಲೇ ಇಲ್ಲ, ಎಲ್ಲಾ ಸದಸ್ಯರು ಮೆಚ್ಚುವ ಕಾರಣ ಸದನ ನಡೆಸೋದು ಹೇಗೆ? ಹಾಗಾಗಿ ಸಚಿವರು ಬಂದು ಉತ್ತರ ಹೇಳುವವರೆಗೂ ಸದನ ನಡೆಸೋದಿಲ್ಲ ಎಂದೇಳಿ ಸ್ಪೀಕರ್ ಖಾದರ್ ಹೊರಟು ಹೋಗಿದ್ದಾರೆ.