... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಇರಾನ್‌ನ ರಹಸ್ಯ ಸ್ಥಳದಲ್ಲಿ ಮೊಜ್ತಬಾ ಖಮೇನಿ;

ಇರಾನ್‌ನ ರಹಸ್ಯ ಸ್ಥಳದಲ್ಲಿ ಮೊಜ್ತಬಾ ಖಮೇನಿ; ಗಾಯಗೊಂಡಿರುವ ಶಂಕೆ?

ಟೆಹರಾನ್‌: ಇರಾನ್‌ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಕುಟುಂಬ ಹಾಗೂ ಇರಾನ್‌ನ ಉನ್ನತ ಮಟ್ಟದ ನಾಯಕರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ವಾಯುದಾಳಿಯಲ್ಲಿ ಮೊಜ್ತಬಾ ಖಮೇನಿ ಅಲ್ಪ ಅಂತರದಲ್ಲಿ ಪಾರಾಗಿದ್ದಾರೆ. ಈ ದಾಳಿಯಲ್ಲಿ ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಇತರ ಪ್ರಮುಖ ನಾಯಕರು ಸಾವನ್ನಪ್ಪಿದ್ದಾರೆ ಎಂದು ದಿ ಟೆಲಿಗ್ರಾಫ್‌ ವರದಿ ಪ್ರಕಟಿಸಿದೆ. ಮೊಜ್ತಬಾ ಅವರು ಇರಾನ್‌ನ ರಹಸ್ಯ ಸ್ಥಳದಲ್ಲಿ ಅಡಗಿದ್ದಾರೆ ಎನ್ನಲಾಗಿದೆ. ಅವರ ಆರೋಗ್ಯ ಮತ್ತು ಆಡಳಿತ ಸಾಮರ್ಥ್ಯ ಕುರಿತು ಅನುಮಾನಗಳು ಮೂಡಿದ್ದು, ಕೆಲವು ವರದಿಗಳ ಪ್ರಕಾರ ಅವರು ಗಂಭೀರವಾಗಿ ಗಾಯಗೊಂಡು ಕೋಮಾದಲ್ಲಿದ್ದಾರೆ ಎನ್ನಲಾಗಿದೆ. 

ಪ್ರಸ್ತುತ ಸ್ಥಿತಿಯ ಬಗ್ಗೆ ಸೇನಾ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ಇಲ್ಲವೆಂದು ಇರಾನ್ ಮೂಲಗಳು ತಿಳಿಸಿವೆ. ಅಮೆರಿಕ ಮತ್ತು ಇಸ್ರೇಲ್‌ ಸೇನಾ ಪಡೆಗಳು ಇರಾನ್‌ ಮೇಲೆ ಫೆಬ್ರುವರಿ 28ರಂದು ಅಯತೊಲ್ಲಾ ಅಲಿ ಖಮೇನಿ ನಿವಾಸವನ್ನು ಗುರಿಯಾಗಿಸಿಕೊಂಡು ‘ಬ್ಲೂ ಸ್ಪ್ಯಾರೊ‘ ಕ್ಷಿಪಣಿ ದಾಳಿ ನಡೆಸಿದ್ದವು. ದಾಳಿ ಮಾಡುವ ಕೆಲವೇ ನಿಮಿಷಗಳ ಮುನ್ನ ಮೊಜ್ತಬಾ ಖಮೇನಿ ತಮ್ಮ ಮನೆಯಿಂದ ಹೊರಬಂದು ಸಮೀಪದಲ್ಲಿರುವ ಪಾರ್ಕ್‌ನಲ್ಲಿ ವಾಕ್‌ ಮಾಡುತ್ತಿದ್ದರು. ದಾಳಿಯಲ್ಲಿ ಅವರ ಕುಟುಂಬದವರು ಮತ್ತು ಸೇನೆಯ ಉನ್ನತಮಟ್ಟದ ಅಧಿಕಾರಿಗಳು ಮೃತಪಟ್ಟರೆ, ಮೊಜ್ತಬಾ ಖಮೇನಿ ಅವರ ಕಾಲಿಗೆ ಸಣ್ಣ ಪುಟ್ಟ ಗಾಯಗಳಾದವು ಎಂದು ವರದಿಯಲ್ಲಿ ಹೇಳಲಾಗಿದೆ. ಮೊಜ್ತಬಾ ಅವರ ಪತ್ನಿ ಜಹೇರಾ ಅದೆಲ್‌ ಹಾಗೂ ಪುತ್ರ ಬಾಘರ್‌ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹೊಸೇನಿ (ಖಮೇನಿ ಅವರ ಮಿಲಿಟರಿ ಅಧಿಕಾರಿ) ಆಡಿಯೊ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. 

ದಾಳಿ ಸಂದರ್ಭದಲ್ಲಿ ಖಮೇನಿ ನಿವಾಸದಲ್ಲಿ ನಡೆದ ಘಟನೆಗಳ ವಿವರವನ್ನು ಈ ಆಡಿಯೋ ಮೊದಲ ಬಾರಿಗೆ ಬಹಿರಂಗಪಡಿಸಿದೆ. ಅಲ್ಲಿನ ಧಾರ್ಮಿಕ ಸಭಾಂಗಣ, ಮಕ್ಕಳ ಕೊಠಡಿಗಳು, ಮಿಲಿಟರಿ ಕಚೇರಿಗಳು, ಖಮೇನಿಯ ವೈಯಕ್ತಿಕ ಕೊಣೆಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸಲಾಗಿದೆ. ಮೊಜ್ತಬಾ ಹೊರಗೆ ಹೋಗಿದ್ದರಿಂದ ಅವರು ಪಾರಾದರು. ಅವರ ಪತ್ನಿ ನಮ್ಮ ಎದುರೇ ಮೃತಪಟ್ಟರು. ಮತ್ತೊಂದು ನಿವಾಸದಲ್ಲಿದ್ದ ಮೊಸ್ತಫಾ ಖಮೇನಿ ಮತ್ತು ಅವರ ಪತ್ನಿ ಅಪಾಯದಿಂದ ಪಾರಾದರು ಎಂದು ಹೊಸೇನಿ ಆಡಿಯೊದಲ್ಲಿ ಹೇಳಿದ್ದಾರೆ. ಇರಾನ್ ರಕ್ಷಣಾ ಸಚಿವ ಅಜಿಜ್‌, ಖಮೇನಿಯ ಸೇನಾ ಕಚೇರಿ ಮುಖ್ಯಸ್ಥ ಹಾಗೂ ಮಿಲಿಟರಿ ಅಧಿಕಾರಿಗಳು ಸೇರಿ ಹಲವರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆಡಿಯೊದಲ್ಲಿ ಹೇಳಲಾಗಿದೆ.

Source : Prajavani

1 hour ago

Home Flash News