... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಇರಾನ್‌ ಬ್ರಹ್ಮಾಸ್ತ್ರ:

ಇರಾನ್‌ ಬ್ರಹ್ಮಾಸ್ತ್ರ: ನೃತ್ಯ ಮಾಡುತ್ತಲೇ ಶತ್ರು ನೆಲೆಗೆ ಅಪ್ಪಳಿಸುವ ಘಾತಕ

ಇರಾನ್‌ ದೇಶದ ಅತ್ಯಂತ ಮುಂದುವರಿದ ಖಂಡಾಂತರ ಕ್ಷಿಪಣಿ ವ್ಯವಸ್ಥೆಯಲ್ಲಿ, ಸೆಜ್ಜಿಲ್ ಕ್ಷಿಪಣಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಸೆಜ್ಜಿಲ್ ಕ್ಷಿಪಣಿಯನ್ನು ಇರಾನ್‌ ದೇಶಿಯವಾಗಿ ನಿರ್ಮಿಸಿಕೊಂಡಿದ್ದು, ಎರಡು ಹಂತಗಳಿಂದ ಕೂಡಿದೆ. ಅಲ್ಲದೇ ಈ ಕ್ಷಿಪಣಿಗೆ ದ್ರವ ಇಂಧನದ ಬದಲಿಗೆ, ಘನ ಇಂಧನ ಬಳಸಬಹುದಾಗಿದೆ. ಇದೊಂದು ಮಧ್ಯಮ-ಶ್ರೇಣಿಯ ಖಂಡಾಂತರ ಕ್ಷಿಪಣಿಯಾಗಿದ್ದು, ಅಶುರ, ಅಶೌರ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಸೆಜ್ಜಿಲ್ ಕ್ಷಿಪಣಿಯು ಸುಮಾರು 2 ಸಾವಿರ ಕಿಲೋಮೀಟರ್‌ ದೂರದಲ್ಲಿರುವ ತನ್ನ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದೇ ಹೇಳಲಾಗುತ್ತದೆ.

 ಬಹುತೇಕ ಮಧ್ಯಪ್ರಾಚ್ಯದ ದೇಶಗಳನ್ನು ಆರಾಮವಾಗಿ ಗುರಿಯಾಗಿಸುವ ಸಾಮರ್ಥ್ಯ ಈ ಕ್ಷಿಪಣಿಗಿದೆ ಎನ್ನುತ್ತಾರೆ ರಕ್ಷಣಾ ತಜ್ಞರು. ಸಿಎಸ್‌ಐಎಸ್‌ ವರದಿ ಪ್ರಕಾರ ಈ ಕ್ಷಿಪಣಿ ಸುಮಾರು 700 ಕೆ.ಜಿ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲದ್ದಾಗಿದೆ. ಘನ ಇಂಧನವೇ, ಪ್ಲಸ್‌ ಪಾಯಿಂಟ್‌.. ಸಾಮಾನ್ಯವಾಗಿ ಹೆಚ್ಚಿನ ಕ್ಷಿಪಣಿಗಳಿಗೆ ದ್ರವ ರೂಪದ ಇಂಧನವನ್ನು ಬಳಕೆ ಮಾಡಲಾಗುತ್ತದೆ. ಆದರೆ ಸೆಜ್ಜಿಲ್‌ಗೆ ಘನ ಇಂಧನ ಸಾಕಾಗುತ್ತದೆ. ದ್ರವ ಇಂಧನ ವ್ಯವಸ್ಥೆಯುಳ್ಳ ಕ್ಷಿಪಣಿಗಳಿಗಿಂತ ತುರ್ತಾಗಿ ಘನ ಇಂಧನವುಳ್ಳ ಕ್ಷಿಪಣಿಗಳನ್ನು ಉಡಾಯಿಸಬಹುದು. ಇವು ರೆಡಾರ್‌ಗಳ ಕಣ್ಣು ತಪ್ಪಿಸುವ ಸಾಧ್ಯತೆಯೂ ಇದ್ದು, ಯಾವುದೇ ಗಟ್ಟಿಯಾದ ಸ್ಥಳದಿಂದ ಮೊಬೈಲ್‌ ವ್ಯವಸ್ಥೆಯಿಂದಲೂ ಉಡಾಯಿಸಬಹುದಾಗಿದೆ.

Source : Prajavani

1 hour ago

Home Flash News