... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಇರಾನ್‌ನೊಂದಿಗೆ ಯುದ್ಧದ ನಡುವೆಯೂ ಈ ಮುಸ್ಲಿಂ ರಾಷ್ಟ್ರ

ಇರಾನ್‌ನೊಂದಿಗೆ ಯುದ್ಧದ ನಡುವೆಯೂ ಈ ಮುಸ್ಲಿಂ ರಾಷ್ಟ್ರ ಭಾರತದ ಸ್ನೇಹಕ್ಕಾಗಿ ಹೊಸ ಮಾರ್ಗದ ಮೂಲಕ ಲಕ್ಷಾಂತರ ಬ್ಯಾರೆಲ್ ತೈಲ ಕಳಿಸುತ್ತಿದೆ!

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಜಗತ್ತನ್ನೇ ಆತಂಕಕ್ಕೆ ತಳ್ಳಿರುವ ಬೆನ್ನಲ್ಲೇ ಭಾರತಕ್ಕೆ ಸಮಾಧಾನಕರ ಸುದ್ದಿಯೊಂದು ಸಿಕ್ಕಿದೆ. ಇರಾನ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಕಂಟಕ ಎದುರಾಗಿರುವ ಈ ಸಂದರ್ಭದಲ್ಲಿ, ಸೌದಿ ಅರೇಬಿಯಾ ಭಾರತದ ನೆರವಿಗೆ ಧಾವಿಸಿದೆ. ಭಾರತಕ್ಕೆ ನಿರಂತರ ತೈಲ ಪೂರೈಕೆ ಮಾಡುವ ಭರವಸೆ ನೀಡಿರುವ ಸೌದಿ, ಈಗಾಗಲೇ ತನ್ನ ಸ್ನೇಹದ ಸಂಕೇತವಾಗಿ ತೈಲ ಟ್ಯಾಂಕರ್‌ಗಳನ್ನು ರವಾನಿಸಲು ಆರಂಭಿಸಿದೆ.
ಹಾರ್ಮುಜ್ ಅಸುರಕ್ಷಿತ, ಪರ್ಯಾಯ ಮಾರ್ಗ ಅಳವಡಿಸಿಕೊಂಡ ಸೌದಿ ವಿಶ್ವದ ಒಟ್ಟು ತೈಲ ವ್ಯಾಪಾರದ ಶೇ. 20 ರಷ್ಟು ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಆದರೆ, ಇರಾನ್ ಹಡಗುಗಳ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗವು ಈಗ ಅತ್ಯಂತ ಅಸುರಕ್ಷಿತವಾಗಿದೆ. ಈ ಅಪಾಯವನ್ನು ಅರಿತ ಸೌದಿ ಅರೇಬಿಯಾ, ಭಾರತಕ್ಕೆ ತೈಲ ತಲುಪಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಂಡಿದೆ. ಸೌದಿಯ 'ಯಾನ್ಬು' ಬಂದರಿನಿಂದ ಕೆಂಪು ಸಮುದ್ರದ ಮೂಲಕ ಈಗ ಭಾರತಕ್ಕೆ ಕಚ್ಚಾ ತೈಲ ಸಾಗಣೆಯಾಗುತ್ತಿದೆ.

 ಭಾರತದತ್ತ ಬರುತ್ತಿವೆ 4 ಬೃಹತ್ ಟ್ಯಾಂಕರ್‌ಗಳು ಕೆಪ್ಲರ್ ವರದಿಯ ಅಂಕಿಅಂಶಗಳ ಪ್ರಕಾರ, ಸೌದಿ ಅರೇಬಿಯಾದಿಂದ ನಾಲ್ಕು ಬೃಹತ್ ಟ್ಯಾಂಕರ್‌ಗಳು ಈಗಾಗಲೇ ಭಾರತದತ್ತ ಪ್ರಯಾಣ ಬೆಳೆಸಿವೆ. ಈ ಟ್ಯಾಂಕರ್‌ಗಳಲ್ಲಿ ಸರಿಸುಮಾರು 6 ಮಿಲಿಯನ್ ಬ್ಯಾರೆಲ್ ತೈಲವಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಇನ್ನೂ 9 ರಿಂದ 10 ಮಿಲಿಯನ್ ಬ್ಯಾರೆಲ್ ತೈಲ ಭಾರತಕ್ಕೆ ತಲುಪುವ ನಿರೀಕ್ಷೆಯಿದೆ. ಸುಮಾರು 1,200 ಕಿಲೋಮೀಟರ್ ಉದ್ದದ ಪೈಪ್‌ಲೈನ್ ಮೂಲಕ ತೈಲವನ್ನು ಯಾನ್ಬು ಬಂದರಿಗೆ ತಂದು ಅಲ್ಲಿಂದ ಹಡಗುಗಳ ಮೂಲಕ ಭಾರತಕ್ಕೆ ಕಳುಹಿಸಲಾಗುತ್ತಿದೆ.

Source : Asianet News

1 hour ago

Home Flash News