ಇಫ್ತಾರ್ಕೂಟದಲ್ಲಿ ಭಾಗಿ ಆದ ದಳಪತಿ ವಿಜಯ್; ವಿವಾದದಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ
ದಳಪತಿ ವಿಜಯ್ ಇತ್ತೀಚೆಗೆ 2025ರ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ಕಳೆದ ವರ್ಷದ ವಿವಾದದಿಂದ ಪಾಠ ಕಲಿತ ವಿಜಯ್, ಈ ಬಾರಿ ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದು, ಆಮಂತ್ರಣ ಆಧಾರಿತ ಕಾರ್ಯಕ್ರಮ ಆಯೋಜಿಸಿದರು. ತಮ್ಮ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರದಂತೆ ವಿವಾದಗಳಿಂದ ದೂರವಿರಲು ಅವರು ಇಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಾರೆ. ಕಳೆದ ವರ್ಷ ರಂಜಾನ್ ಸಂದರ್ಭದಲ್ಲಿ ದಳಪತಿ ವಿಜಯ್ ಅವರು ಇಫ್ತಾರ್ ಕೂಟದಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರ ವಿರುದ್ಧ ದೂರು ದಾಖಲಾಗಿತ್ತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಬಾರಿಯೂ ವಿಜಯ್ ಅವರು ಇಫ್ತಾರ್ ಕೂಟದಲ್ಲಿ ಭಾಗಿ ಆಗಿದ್ದಾರೆ. ಆದರೆ, ವಿವಾದಿಂದ ದೂರ ಇರಲು ಅವರು ಕೆಲ ತಂತ್ರಗಳನ್ನು ಬಳಸಿದ್ದಾರೆ.
ಮಮಲ್ಲಪುರಂನಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿತ್ತು. ಹೋಟೆಲ್ ಒಂದರಲ್ಲಿ ಬುಧವಾರ ಸಂಜೆ ಆರು ಗಂಟೆಯಿಂದ 9 ಗಂಟೆವರೆಗೆ ಈ ಕಾರ್ಯಕ್ರಮ ನೆರವೇರಿತ್ತು. ಈ ಕೂಟದಲ್ಲಿ ಕೇವಲ ಆಮಂತ್ರಣ ನೀಡಿದವರು ಮಾತ್ರ ಭಾಗಿ ಆಗಲು ಅವಕಾಶ ಇತ್ತು. ತಮಿಳುನಾಡಿನಾದ್ಯಂತದಿಂದ 1 ಸಾವಿರ ಜನರಿಗೆ ಮಾತ್ರ ಆಮಂತ್ರಣಕೊಡಲಾಗಿತ್ತು. ಆಮಂತ್ರಣ ಇಲ್ಲದೆ ಬರುವವರಿಗೆ ಆಹ್ವಾನ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಲಾಗಿತ್ತು.
ಚುನಾವಣಾ ಸಮಯ ಮತ್ತು ಈಗ ಜಾರಿಯಲ್ಲಿರುವ ನೀತಿ ಸಂಹಿತೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದು ಈ ಸಭೆಯನ್ನು ಆಯೋಜಿಸಲಾಗಿದೆ ಎಂದು ಟಿವಿಕೆ ಸ್ಪಷ್ಟಪಡಿಸಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ವಿಜಯ್ ಅವರ ಪ್ರಚಾರ ಸಭೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಹೀಗಾಗಿ, ಯಾವುದೇ ವಿವಾದ ಆದರೂ ಅದು ಅವರಿಗೆ ಹಿನ್ನಡೆ ತರುತ್ತದೆ. ಅದರಿಂದ ತಪ್ಪಿಸಿಕೊಳ್ಳು ಅವರು ಮುಂಜಾಗೃತ ಕ್ರಮ ಕೈಗೊಳ್ಳುತ್ತಿದ್ದಾರೆ.