ಪೆಟ್ರೋಲ್ ರೇಟ್ ಲೀಟರ್‌ಗೆ 5 ರೂಪಾಯಿ ಏರಿಕೆ.. ಇಂದಿನಿಂದಲೇ ಪರಿಷ್ಕೃತ ದರ ಜಾರಿ
ಈಗಾಗಲೇ ಗ್ಯಾಸ್ ದರ ಏರಿಕೆ ಹಾಗೂ ಹೋಟೆಲ್ ತಿಂಡಿಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಖಾಸಗಿ ಇಂಧನ ಕಂಪನಿಯಾದ ‘ನಯಾರಾ’ (Nayara) ತನ್ನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏಕಾಏಕಿ ಏರಿಕೆ ಮಾಡಿದೆ. ಬೆಂಗಳೂರು: ಈಗಾಗಲೇ ಗ್ಯಾಸ್ ದರ ಏರಿಕೆ ಹಾಗೂ ಹೋಟೆಲ್ ತಿಂಡಿಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಖಾಸಗಿ ಇಂಧನ ಕಂಪನಿಯಾದ ‘ನಯಾರಾ’ (Nayara) ತನ್ನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏಕಾಏಕಿ ಏರಿಕೆ ಮಾಡಿದೆ.
ನಯಾರಾ ಬಂಕ್‌ಗಳಲ್ಲಿ ಬೆಲೆ ಏರಿಕೆ ವಿವರ
ನಯಾರಾ ಪೆಟ್ರೋಲ್ ಬಂಕ್‌ಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಜಾರಿಗೆ ಬರುವಂತೆ ಇಂಧನ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ. ವಿಶೇಷವಾಗಿ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 5 ರೂಪಾಯಿ ಹಾಗೂ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ: ಫೇಸ್‌ಬುಕ್, ಇನ್‌ಸ್ಟಾದಲ್ಲಿ ಹಣ ಗಳಿಸಲು ಹೊಸ ಮಾರ್ಗ - ರೀಲ್ಸ್ನಲ್ಲಿ ಹಣ ಗಳಿಸುವುದು ಇನ್ನೂ ಸುಲಭ..!
ನಿನ್ನೆ ಮತ್ತು ಇಂದಿನ ದರಗಳ ಹೋಲಿಕೆ
ಪೆಟ್ರೋಲ್ ನಿನ್ನೆ ಲೀಟರ್‌ಗೆ 103.16 ರೂಪಾಯಿ ಇದ್ದರೆ ಇವತ್ತು 108.16 ಆಗುವ ಮೂಲಕ 5 ರೂಪಾಯಿ ಏರಿಸಿದ್ದಾರೆ. ಇನ್ನು ಡಿಸೇಲ್ ನಿನ್ನೆ ಲೀಟರ್‌ಗೆ 90.99 ರೂಪಾಯಿ ಇತ್ತು, ಇಂದು ಮೂರು ರೂಪಾಯಿ ಏರಿಕೆ ಕಂಡು 93.99 ರೂಪಾಯಿ ಆಗಿದೆ.