ದುಬೈನ ಅಮೆರಿಕ ನೆಲೆ, ಕುವೈತ್ ಏರ್‌ಪೋರ್ಟ್‌ಗೆ ಇರಾನ್ ದಾಳಿ
ಟೆಹ್ರಾನ್/ದುಬೈ: ಮಧ್ಯಪ್ರಾಚ್ಯ ಸಂಘರ್ಷಕ್ಕೆ 1 ತಿಂಗಳಾಗುತ್ತಿದ್ದಂತೆಯೇ ದುಬೈನಲ್ಲಿರುವ 2 ಅಮೆರಿಕ ಸೈನ್ಯದ ಅಡಗುತಾಣಗಳ ಮೇಲೆ ದಾಳಿ ಮಾಡಿರುವುದಾಗಿ ಇರಾನ್ ಹೇಳಿಕೊಂಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕೋರ್, 500ಕ್ಕೂ ಹೆಚ್ಚು ಅಮೆರಿಕ ಸೇನಾ ಸಿಬ್ಬಂದಿಯನ್ನು ಹೊಂದಿದ್ದ ಈ ಸ್ಥಳಗಳ ಮೇಲೆ ನಿಖರವಾದ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಇನ್ನೊಂದೆಡೆ, ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹಲವಾರು ಡ್ರೋನ್ ದಾಳಿಗಳು ನಡೆದಿದ್ದು, ವಿಮಾನದ ರಾಡಾರ್ ವ್ಯವಸ್ಥೆಗೆ ಹಾನಿಯಾಗಿದೆ. ಆದಾಗ್ಯೂ, ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ‘ಇರಾನ್ ಹಾಗೂ ಅದರ ಬೆಂಬಲಿತರ ಕೃತ್ಯ ಇದು’ ಎಂದು ಕುವೈತ್ ದೂರಿದೆ.