ಇಸ್ರೇಲ್ ದಾಳಿಯಲ್ಲಿ ಇರಾನ್ ನೌಕಾಪಡೆ ಮುಖ್ಯಸ್ಥ ಅಲಿರೆಜಾ ತಂಕಸೀರಿ ಹತ್ಯೆ
ಟೆಹರಾನ್: ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಕೋರ್‌ನ (ಐಆರ್‌ಜಿಸಿ) ನೌಕಾಪಡೆ ಮುಖ್ಯಸ್ಥ ಅಲಿರೆಜಾ ತಂಕಸೀರಿ ಮೃತಪಟ್ಟಿರುವುದನ್ನು ಇರಾನ್ ದೃಢಪಡಿಸಿದೆ. ಅಲಿರೆಜಾ ಅವರು ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ತೈಲ ಹಡಗುಗಳ ಮೇಲೆ ನಿಗಾವಹಿಸುವ ಪ್ರಮುಖ ಅಧಿಕಾರಿಯಾಗಿದ್ದರು. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ತಂಕಸೀರಿ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಸೆಪಾಹ್ ವೆಬ್‌ಸೈಟ್ ವರದಿ ಮಾಡಿದೆ. ಅಮೆರಿಕ–ಇರಾನ್ ನಡುವೆ ಕದನ ವಿರಾಮ ಒಪ್ಪಂದಕ್ಕೆ ಪರೋಕ್ಷ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲೇ, ಅಲಿರೆಜಾ ಹತ್ಯೆ ನಡೆದಿರುವುದು ಸಂಘರ್ಷ ಮತ್ತಷ್ಟು ತಾರಕಕ್ಕೇರುವಂತಾಗಿದೆ. ಮಾರ್ಚ್ 26ರಂದು ಅಲಿರೆಜಾ ಸೇರಿ ಇರಾನ್ ನೌಕಾಪಡೆಯ ಇತರೆ ಕೆಲವು ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲಿ ಕಾಟ್ಜ್ ಹೇಳಿದ್ದರು. ಈ ಕುರಿತು ಇರಾನ್ ಖಚಿತಪಡಿಸಿದೆ.