ಹಿರಿಯ ಐಎಎಸ್ ಅಧಿಕಾರಿ ಎಚ್.ರಾಜೇಶ್ ಪ್ರಸಾದ್ ಉದಯವಾಣಿ ಪ್ರಧಾನ ಕಚೇರಿಗೆ ಭೇಟಿ
ಮಣಿಪಾಲ:ಚಂಡೀಗಢದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಭಾರತ ಸರಕಾರದ ಕಾರ್ಯದರ್ಶಿಯಾಗಿ ಹಿರಿಯ ಸ್ಥಾನಕ್ಕೆ ಮುಂಬಡ್ತಿ ಹೊಂದಿರುವ ಹಿರಿಯ ಐಎಎಸ್ ಅಧಿಕಾರಿ ಹಿರಿಯಡಕ ರಾಜೇಶ್ ಪ್ರಸಾದ್ ಅವರು ಸೋಮವಾರ(ಮಾ30) ಉದಯವಾಣಿ ಪ್ರಧಾನ ಕಚೇರಿಗೆ ಭೇಟಿ ನೀಡಿದರು. ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷರಾದ ಡಾ.ಟಿ.ಸತೀಶ್ ಯು. ಪೈ,ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿ.ನ ಸಿಇಓ ಮತ್ತು ಎಂಡಿ ವಿನೋದ್ ಕುಮಾರ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಉದಯವಾಣಿ ಡಿಜಿಟಲ್ ನ ಸ್ಟುಡಿಯೋ ಗೆ ಭೇಟಿ ನೀಡಿ ವಿಶೇಷ ಸಂದರ್ಶನದಲ್ಲಿ ಭಾಗಿಯಾದರು. ವಿವಿಧ ವಿಚಾರಗಳ ಕುರಿತು ಮಾತನಾಡಿರುವ ಸಂದರ್ಶನ ಶೀಘ್ರ ಉದಯವಾಣಿ ಯೂಟ್ಯೂಬ್ ಮತ್ತು ಸಾಮಾಜಿಕ ತಾಣಗಳಲ್ಲಿ ಪ್ರಕಟವಾಗಲಿದೆ. ಮಣಿಪಾಲ್ ಗ್ರೂಪ್‌ನ ಮ್ಯಾಗಜೀನ್ ಮತ್ತು ಇನಿಶಿಯೇಟಿವ್ ವಿಭಾಗದ ಉಪಾಧ್ಯಕ್ಷ ರಾಮಚಂದ್ರ ಮಿಜಾರ್, ಉದಯವಾಣಿ ಡಿಜಿಟಲ್ ನ ಹಿರಿಯ ಪ್ರಬಂಧಕಿ ಉಷಾರಾಣಿ ಕಾಮತ್, ಉದಯವಾಣಿ ಉಡುಪಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ , ಎಂಜಿಎಂ ಕಾಲೇಜಿನ ನಿವೃತ್ತ ಉಪನ್ಯಾಸಕ ಸುರೇಂದ್ರನಾಥ್ ಶೆಟ್ಟಿ ಕೊಕ್ಕರ್ಣೆ, ಉದಯವಾಣಿ ಡಿಜಿಟಲ್ ಚೀಫ್ ಕಂಟೆಂಟ್ ಎಡಿಟರ್ ನಾಗೇಂದ್ರ ತ್ರಾಸಿ, ವಿಡಿಯೋ ಕಂಟೆಂಟ್ ಕೋರ್ಡಿನೇಟರ್ ರವಿಕಿರಣ್ ಈ ಸಂದರ್ಭದಲ್ಲಿ ಜತೆಗಿದ್ದರು.