... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ದೇಶದಲ್ಲಿ 60 ದಿನಗಳಿಗೆ ಸಾಕಾಗುವಷ್ಟು ವಿಮಾನ ಇಂಧನ ದಾಸ್ತಾನು:

ದೇಶದಲ್ಲಿ 60 ದಿನಗಳಿಗೆ ಸಾಕಾಗುವಷ್ಟು ವಿಮಾನ ಇಂಧನ ದಾಸ್ತಾನು: ಸಚಿವ ರಾಮ್ ಮೋಹನ್ ನಾಯ್ಡು

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡಗಳ ನಡುವೆಯೂ ಭಾರತದಲ್ಲಿ ವಿಮಾನ ಇಂಧನದ (ATF) ಕೊರತೆಯಾಗುವುದಿಲ್ಲ. ಮುಂದಿನ 60 ದಿನಗಳವರೆಗೆ ಯಾವುದೇ ಅಡೆತಡೆಯಿಲ್ಲದೆ ವಿಮಾನ ಇಂಧನ ಪೂರೈಕೆ ಮಾಡಲು ದೇಶದಲ್ಲಿ ಸಾಕಷ್ಟು ದಾಸ್ತಾನು ಇದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಸೋಮವಾರ ರಾಜ್ಯಸಭೆಗೆ ತಿಳಿಸಿದ್ದಾರೆ. ಮಧ್ಯಪ್ರಾಚ್ಯ ಸಂಘರ್ಷದಿಂದ ತೈಲ ಬಿಕ್ಕಟ್ಟು ಉಂಟಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದ ವಿಮಾನಯಾನ ಕ್ಷೇತ್ರಕ್ಕೆ ಎದುರಾಗಿರುವ ಆತಂಕವನ್ನು ದೂರ ಮಾಡಿದರು. ಭಾರತದಲ್ಲಿ ಉತ್ಪತ್ತಿಯಾಗುವ ಒಟ್ಟು ವಿಮಾನ ಇಂಧನದಲ್ಲಿ ಅರ್ಧದಷ್ಟು ದೇಶೀಯ ಬಳಕೆಗೆ ಬಳಕೆಯಾದರೆ. 

ಉಳಿದ ಅರ್ಧದಷ್ಟು ರಫ್ತಾಗುತ್ತಿದೆ. ಹೀಗಾಗಿ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯವಾಗುವ ಸಾಧ್ಯತೆಯಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ವಿಮಾನಯಾನ ಸಂಸ್ಥೆಗಳ ಸುರಕ್ಷತಾ ತಪಾಸಣೆಯನ್ನು ಹೆಚ್ಚಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ನಿಯಮಿತವಾಗಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಬೋಯಿಂಗ್ ವಿಮಾನಗಳ ತಪಾಸಣೆ: ಜುಲೈ 2025ರಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದ ಹಿನ್ನೆಲೆಯಲ್ಲಿ, ದೇಶದ ಎಲ್ಲಾ ಬೋಯಿಂಗ್ ವಿಮಾನಗಳ 'ಫ್ಯುಯೆಲ್ ಕಂಟ್ರೋಲ್ ಸ್ವಿಚ್' ತಪಾಸಣೆ ನಡೆಸಲು ಡಿಜಿಸಿಎ (DGCA) ಆದೇಶಿಸಿತ್ತು. ಪ್ರಸ್ತುತ ಎಲ್ಲಾ ವಿಮಾನಗಳ ತಪಾಸಣೆ ಪೂರ್ಣಗೊಂಡಿದ್ದು, ಅವು ಹಾರಾಟಕ್ಕೆ ಯೋಗ್ಯವಾಗಿವೆ ಎಂದು ಸಚಿವರು ಲಿಖಿತ ಉತ್ತರ ನೀಡಿದರು.

Source : Udayavani

1 hour ago

Home Flash News