Vaibhav Sooryavanshi: ‘ನಾನು ಕೇಕ್ ಕಟ್ ಮಾಡಬೇಕಿತ್ತು, ಆದರೆ ಬೇಗ ಮಲ್ಕೊಂಡೆ’, 15 ಎಸೆತಗಳಲ್ಲಿ CSK ತಂಡವನ್ನು ಧ್ವಂಸಗೊಳಿಸಿ ವೈಭವ್ ಹೇಳಿದ್ದೇನು?
ನವದೆಹಲಿ: ಮೂರು ದಿನಗಳ ಹಿಂದೆ ಜಗ ಮೆಚ್ಚಿದ ಅಪ್ರಾಪ್ತ ಬಾಲಕ ವೈಭವ್ ಸೂರ್ಯವಂಶಿ (Vaibhav Sooryavanshi) ಜಸ್ಟ್ 15ನೇ ವರ್ಷಕ್ಕೆ ಕಾಲಿಟ್ಟರು. 15 ವರ್ಷಕ್ಕೆ ಕಾಲಿಟ್ಟಿರೋದು ವೈಭವ್ ಸೂರ್ಯವಂಶಿ ಕ್ರಿಕೆಟ್ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಇದರೊಂದಿಗೆ, ಅವರು ಐಸಿಸಿ ನಿಯಮಗಳ ಅಡಿಯಲ್ಲಿ ಭಾರತಕ್ಕಾಗಿ ಹಿರಿಯ ಮಟ್ಟದ ಕ್ರಿಕೆಟ್ (IPL 2026) ಆಡಲು ಅರ್ಹರಾಗಿದ್ದಾರೆ.
ಕ್ರಿಕೆಟ್ ಲೆಜೆಂಡ್‌ಗಳು ಮತ್ತು ತಜ್ಞರು ಕೂಡ ವೈಭವ್ ಸೂರ್ಯವಂಶಿಗೆ ಭಾರತದ ಹಿರಿಯರ ತಂಡದಲ್ಲಿ ಆಡಲು ಅವಕಾಶ ನೀಡುವಂತೆ ಬಿಸಿಸಿಐಗೆ ಒತ್ತಡ ಹಾಕಲು ಶುರು ಮಾಡಿದ್ದಾರೆ. ವಿಶೇಷವಾಗಿ ವೈಭವ್ ಸೂರ್ಯವಂಶಿ 2025ರ ಐಪಿಎಲ್ ಸೀಸನ್‌ನಲ್ಲಿ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದಾಗಿನಿಂದ ಈ ಒತ್ತಡ ಹೆಚ್ಚಿದೆ.
14 ವರ್ಷದ ಬಾಲಕ ಅನುಭವಿ ವೃತ್ತಿಪರರ ವಿರುದ್ಧ ಇಷ್ಟೊಂದು ಸಲೀಸಾಗಿ ಸಿಕ್ಸರ್‌ಗಳನ್ನು ಬಾರಿಸುವುದನ್ನು ಜಗತ್ತು ಅಪರೂಪವಾಗಿ ಕಂಡಿತ್ತು. 1989 ರಲ್ಲಿ ಕೇವಲ 16 ನೇ ವಯಸ್ಸಿನಲ್ಲಿ ಭಾರತಕ್ಕಾಗಿ ಪಾದಾರ್ಪಣೆ ಮಾಡಿದ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ ಸಚಿನ್ ತೆಂಡೂಲ್ಕರ್‌ಗೆ ಅವನನ್ನು ಹೋಲಿಸಲು ಪ್ರಾರಂಭಿಸಿದರು.