TVK-Vijay: 10 ಲಕ್ಷುರಿ ಮನೆಗಳ ಒಡೆಯ ವಿಜಯ್! ಎಲ್ಲೆಲ್ಲಿ ಎಷ್ಟೆಷ್ಟು ಬಂಗಲೆಗಳಿವೆ?
ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಟಿವಿಕೆ ಮುಖಂಡ (TVK Leader) ವಿಜಯ್ (Vijay) ಅವರು ಸದ್ಯ ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಂತರ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ಟಿವಿಕೆ ಮೂಲಕ ವಿಧಾನಸಭಾ ಚುನಾವಣೆಯಲ್ಲಿ (Assembly Election) ಸ್ಪರ್ಧಿಸುತ್ತಿರುವ ಕಾಲಿವುಡ್ ಸ್ಟಾರ್ ಗೆಲ್ಲಲೇ ಬೇಕು ಎಂದು ಟೊಂಕ ಕಟ್ಟಿ ನಿಂತಿದ್ದಾರೆ. ಈ ವೇಳೆ ಅವರು ನಾಮಿನೇಷನ್ ಕೂಡಾ ಸಲ್ಲಿಸಿದ್ದು ಅವರ ಆಸ್ತಿ ವಿವರಗಳು ಸೋಷಿಯಲ್ ಮೀಡಿಯಾದ್ಯಂತ (Social Media) ವೈರಲ್ ಆಗುತ್ತಿದೆ.
ಮಿಳುನಾಡು ವಿಧಾನಸಭೆಯ ಎಲ್ಲಾ 234 ಕ್ಷೇತ್ರಗಳಿಗೂ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮತದಾನದ ದಿನದ ಮೊದಲು, ವಿಜಯ್ ತಮ್ಮ ನಾಮಪತ್ರದ ನೀಡುವಾಗ ಅದರ ಭಾಗವಾಗಿ ತಮ್ಮ ಆಸ್ತಿಯನ್ನು ಘೋಷಿಸಿದರು.
ತಮ್ಮ ಅಧಿಕೃತ ಅಫಿಡವಿಟ್‌ನಲ್ಲಿ, ನಟ-ರಾಜಕಾರಣಿ ತಮ್ಮ ಆಸ್ತಿ, ಹೂಡಿಕೆಗಳು, ಚರ ಮತ್ತು ಸ್ಥಿರ ಆಸ್ತಿಗಳನ್ನು ಮತ್ತು ಪತ್ನಿ ಸಂಗೀತಾ ಸೊರ್ನಲಿಂಗಂ , ಮಗ ಜೇಸನ್ ಸಂಜಯ್ ಮತ್ತು ಮಗಳು ದಿವ್ಯಾ ಸಾಶಾ ಸೇರಿದಂತೆ ಅವರ ಕುಟುಂಬ ಸದಸ್ಯರ ಹಣದ ಬಗ್ಗೆಯೂ ಬಹಿರಂಗಪಡಿಸಿದ್ದಾರೆ.