ಗುಜರಾತ್ ವಿರುದ್ಧ ಪಂಜಾಬ್ಗೆ ರೋಚಕ ಜಯ: ಈ 'ಗೆಲುವಿನ ನಾಯಕ' ಕೂಪರ್ ಕೊನೊಲಿ ಯಾರು?
ಐಪಿಎಲ್ 2026ರ ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ ಜಯ ಸಾಧಿಸಿದೆ. ಮುಲ್ಲಾಂಪುರದ ಸ್ಲೋ ಪಿಚ್‌ನಲ್ಲಿ ನಡೆದ ಈ ಕಾದಾಟದಲ್ಲಿ ಗುಜರಾತ್ ನೀಡಿದ್ದ 163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್, 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಐಪಿಎಲ್ 2026ರ ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ ಜಯ ಸಾಧಿಸಿದೆ. ಮುಲ್ಲಾಂಪುರದ ಸ್ಲೋ ಪಿಚ್‌ನಲ್ಲಿ ನಡೆದ ಈ ಕಾದಾಟದಲ್ಲಿ ಗುಜರಾತ್ ನೀಡಿದ್ದ 163 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್, 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಈ ಗೆಲುವಿನ ಅಸಲಿ ರೂವಾರಿ ಆಸ್ಟ್ರೇಲಿಯಾದ ಯುವ ಆಟಗಾರ ಕೂಪರ್ ಕೊನೊಲಿ (ಕೊನೊಲಿ ಬ್ಯಾಟಿಂಗ್ ಅಬ್ಬರ
ಪಂದ್ಯದ ಸಂಕಷ್ಟದ ಸಮಯದಲ್ಲಿ ಕ್ರೀಸ್‌ಗೆ ಬಂದ ಕೂಪರ್ ಕೊನೊಲಿ, ಕೇವಲ 44 ಎಸೆತಗಳಲ್ಲಿ ಅಜೇಯ 72 ರನ್ ಸಿಡಿಸುವ ಮೂಲಕ ಪಂದ್ಯವನ್ನು ಪಂಜಾಬ್ ಪರ ತಿರುಗಿಸಿದರು. ಇವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‌ಗಳಿದ್ದವು. ಪಂದ್ಯ ಗೆಲ್ಲಿಸಿಕೊಟ್ಟ ಈ ಅಮೋಘ ಪ್ರದರ್ಶನಕ್ಕಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ: ಬಿಗ್ ಶಾಕ್! ಸಿಲಿಂಡರ್ ಬೆಲೆಯಲ್ಲಿ 195 ರೂಪಾಯಿನಿಂದ 218 ರೂವರೆಗೆ ಏರಿಕೆ..! ಯಾರು ಈ ಕೂಪರ್ ಕೊನೊಲಿ?
22 ಆಗಸ್ಟ್ 2003 ರಂದು ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಜನಿಸಿದ ಕೂಪರ್ ಕೊನೊಲಿ, ಎಡಗೈ ಬ್ಯಾಟರ್ ಮತ್ತು ಎಡಗೈ ಸ್ಪಿನ್ ಬೌಲರ್ ಆಗಿರುವ ಆಲ್ ರೌಂಡರ್. 2022ರ ಅಂಡರ್-19 ವಿಶ್ವಕಪ್‌ನಲ್ಲಿ ಇವರು ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದರು. ಬಿಗ್ ಬ್ಯಾಶ್ ಲೀಗ್‌ನಲ್ಲಿ ಪರ್ತ್ ಸ್ಕಾರ್ಚರ್ಸ್ ಪರ ಆಡುವ ಮೂಲಕ ಕೊನೊಲಿ ಜಾಗತಿಕ ಕ್ರಿಕೆಟ್‌ನ ಗಮನ ಸೆಳೆದರು. ಬಿಬಿಎಲ್‌ನಲ್ಲಿ ಒಂದು ಪಂದ್ಯದಲ್ಲಿ 31 ಎಸೆತಗಳಲ್ಲಿ 59 ರನ್ ಮತ್ತು ಇನ್ನೊಂದು ಪಂದ್ಯದಲ್ಲಿ 37 ಎಸೆತಗಳಲ್ಲಿ 77 ರನ್ ಸಿಡಿಸಿ ಅಬ್ಬರಿಸಿದ್ದರು. ಟೂರ್ನಿಯಲ್ಲಿ 15 ವಿಕೆಟ್ ಪಡೆಯುವ ಮೂಲಕ ಬೌಲಿಂಗ್‌ನಲ್ಲೂ ಮಿಂಚಿದ್ದರು.