... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಇಂದು ರಾತ್ರಿ 8 ಗಂಟೆಗೆ ಟೈಂ ಫಿಕ್ಸ್! ಗೂಗಲ್

Iran Warns US: ಇಂದು ರಾತ್ರಿ 8 ಗಂಟೆಗೆ ಟೈಂ ಫಿಕ್ಸ್! ಗೂಗಲ್, ಆ್ಯಪಲ್ ಸೇರಿ ಅಮೆರಿಕಾದ 18 ಕಂಪನಿಗಳ ಮೇಲೆ ಇರಾನ್ ನೇರ ದಾಳಿಗೆ ನಿರ್ಧಾರ!

ಟೆಹ್ರಾನ್: ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ (Iran vs US and Israel) ಯುದ್ಧ ಘೋಷಿಸಿ ಒಂದು ತಿಂಗಳು ಕಳೆದಿದೆ. ದಿನದಿಂದ ದಿನಕ್ಕೆ ಯುದ್ಧದ ತೀವ್ರತೆ ಹೆಚ್ಚುತ್ತಿದೆ. ಅಮೆರಿಕ ಮತ್ತು ಇಸ್ರೇಲ್‌ಗೆ ಇರಾನ್ ತೀವ್ರವಾಗಿ ಪ್ರತಿಕ್ರಿಯಿಸಿದೆ. ಗಲ್ಫ್ ರಾಷ್ಟ್ರಗಳಲ್ಲಿನ (Gulf Countries) ಅಮೆರಿಕದ ಸೇನಾ ನೆಲೆಗಳನ್ನು ಇರಾನ್ ಗುರಿಯಾಗಿಸಿಕೊಂಡಿದೆ. ಇರಾನ್ ಶಕ್ತಿಗೆ ಸ್ವತಃ ಡೊನಾಲ್ಡ್ ಟ್ರಂಪ್ (Donald Trump) ಬೆಚ್ಚಿ ಬಿದ್ದಿದ್ದಾರೆ. ಇಷ್ಟೊಂದು ದಾಳಿ ಮಾಡಿದರೂ ಇರಾನ್ ಪ್ರತಿಕ್ರಿಯಿಸುವ ರೀತಿ ಅಮೆರಿಕದ ತಲೆನೋವನ್ನು ಹೆಚ್ಚಿಸಿದ್ದು, ಇದರ ಬೆನ್ನಲ್ಲೇ ಇರಾನ್ ಹೊಸ ಹಿಟ್ ಲಿಸ್ಟ್ ಅನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ. 

ಅಮೆರಿಕಾದ ಆರ್ಥಿಕತೆಗೆ ಪೆಟ್ಟು ಕೊಡಲು ನಿರ್ಧರಿಸಿರುವ ಇರಾನ್, ಅಮೆರಿಕದ ಆರ್ಥಿಕತೆಯನ್ನು ಬುಡಮೇಲು ಮಾಡಲು ಪ್ಲಾನ್ ರೂಪಿಸಿದ್ದು, ಇಂದು ರಾತ್ರಿ 8 ಗಂಟೆಗೆ ಪ್ರಬಲ ದಾಳಿಯನ್ನು ಮಾಡೋದಾಗಿ ವಾರ್ನ್ ಮಾಡಿದೆ. ಇದು ಡೊನಾಲ್ಡ್ ಟ್ರಂಪ್ ಅವರ ಕಳವಳಗಳನ್ನು ಮತ್ತಷ್ಟು ಹೆಚ್ಚಿಸಿದೆ. ಗಲ್ಫ್ ದೇಶಗಳಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿ ನಾಶಗೈದ ನಂತರ, ಇದೀಗ ಇರಾನ್ ತನ್ನ ಗಮನವನ್ನು ನೇರವಾಗಿ ಅಮೆರಿಕದ ಬೃಹತ್ ತಂತ್ರಜ್ಞಾನ ಕಂಪನಿಗಳತ್ತ ಹರಿಸಿದೆ. ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು (IRGC) ಮಂಗಳವಾರ (ಮಾರ್ಚ್ 31, 2026) ಗೂಗಲ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ 18 ಪ್ರಮುಖ ಅಮೇರಿಕನ್ ಕಂಪನಿಗಳ ಮೇಲೆ ದಾಳಿ ಮಾಡುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿವೆ. ಈ ಎಚ್ಚರಿಕೆ ಈಗ ಜಾಗತಿಕ ಕಾರ್ಪೊರೇಟ್ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.

Source : News18 Kannada

1 hour ago

Home Flash News