... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಇಸ್ರೇಲ್‌ನ 'ಮರಣದಂಡನೆ ಕಾಯ್ದೆ' ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ:

ಇಸ್ರೇಲ್‌ನ 'ಮರಣದಂಡನೆ ಕಾಯ್ದೆ' ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ: ಇಂಡೋನೇಷ್ಯಾ

ಜಕಾರ್ತಾ: ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ಟೀನಿಯನ್ನರಿಗೆ ಅನ್ವಯವಾಗುವಂತೆ ಇಸ್ರೇಲ್ ಅನುಮೋದಿಸಿರುವ 'ಮರಣದಂಡನೆ ಮಸೂದೆ'ಯನ್ನು ಇಂಡೋನೇಷ್ಯಾ ತೀವ್ರವಾಗಿ ಟೀಕಿಸಿದೆ. ಇದು ಅಂತರರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಾನವೀಯ ಕಾನೂನಿನ ಗಂಭೀರ ಉಲ್ಲಂಘನೆ ಎಂದು ಜರಿದಿದೆ. ಬುಧವಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಇಂಡೋನೇಷ್ಯಾದ ವಿದೇಶಾಂಗ ಸಚಿವಾಲಯವು, ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ಇಸ್ರೇಲ್‌ಗೆ ಒತ್ತಾಯಿಸಿದೆ. ಅಲ್ಲದೇ ಸ್ವಾತಂತ್ರ್ಯಕ್ಕಾಗಿ ಪ್ಯಾಲೆಸ್ಟೀನ್‌ ಜನರು ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದೂ ಪುನರುಚ್ಚರಿಸಿದೆ.

 ಏನಿದು ಮಸೂದೆ? ಇಸ್ರೇಲಿಗರನ್ನು ಹತ್ಯೆ ಮಾಡಿರುವ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗುವ ಪ್ಯಾಲೆಸ್ಟೀನಿಯರಿಗೆ ಮರಣದಂಡನೆ ವಿಧಿಸಲು ಅನುಮತಿಸುವ ಕಾನೂನಿಗೆ ಇಸ್ರೇಲ್‌ ಸಂಸತ್ತಿನಲ್ಲಿ ಸೋಮವಾರ(ಮಾರ್ಚ್‌ 30) ಅನುಮೋದನೆ ದೊರೆತಿದೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಖುದ್ದು ಸೆನೆಟ್‌ಗೆ ಆಗಮಿಸಿ, ಈ ಕಾನೂನಿನ ಪರ ಮತ ಚಲಾಯಿಸಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗೆ ಚ್ಯುತಿ ತರುವಂತಹ ಕೃತ್ಯಗಳನ್ನು ಎಸಗುವ ಪ್ಯಾಲೆಸ್ಟೀನಿಯರು ಹಾಗೂ ವೆಸ್ಟ್‌ ಬ್ಯಾಂಕ್‌ ಪ್ಯಾಲೆಸ್ಟೀನಿಯರನ್ನು ನೇರವಾಗಿ ಮರಣದಂಡನೆಗೆ ಗುರಿಪಡಿಸಲು ಈ ಕಾನೂನು ಅನುಮತಿ ನೀಡುತ್ತದೆ. ಇದೇ ಅಪರಾಧಗಳನ್ನು ಖುದ್ದು ಇಸ್ರೇಲಿಗರು ಎಸಗಿದ್ದಲ್ಲಿ ಅಂಥವರನ್ನೂ ಮರಣದಂಡನೆಗೆ ಗುರಿಪಡಿಸಬಹುದಾದ ಆಯ್ಕೆಯನ್ನು ಇಸ್ರೇಲ್‌ ಕೋರ್ಟ್‌ಗಳಿಗೆ ಈ ಕಾನೂನಿನ ಮೂಲಕ ನೀಡಲಾಗಿದೆ.

Source : Prajavani

1 hour ago

Home Flash News