ಜನರ ಪರವಾಗಿ ದನಿ ಎತ್ತುವ ರಾಘವ್ ಚಡ್ಡಾಗೆ ಶಾಕ್, ರಾಜ್ಯಸಭೆ ಡೆಪ್ಯೂಟಿ ನಾಯಕ ಸ್ಥಾನದಿಂದ ಕೊಕ್
ನವದೆಹಲಿ (ಏ.02) ಆಪ್ ಸಂಸದ ರಾಘವ್ ಚಡ್ಡಾ ಪಕ್ಷಾತೀತವಾಗಿ ಜನರು ಇಷ್ಟಪಟ್ಟ ನಾಯಕ. ರಾಜ್ಯಸಭೆಯಲ್ಲಿ ಪ್ರತಿ ಬಾರಿ ಜನರ ಪರವಾಹಿ ಧ್ವನಿ ಎತ್ತಿದ ಸಂಸದನಾಗಿ ಗುರುತಿಸಿಕೊಂಡಿರುವ ರಾಘವ್ ಚಡ್ಡಾಗೆ ಆಮ್ ಆದ್ಮಿ ಪಾರ್ಟಿ ಶಾಕ್ ಕೊಟ್ಟಿದೆ. ರಾಜ್ಯಸಭೆಯ ಡೆಪ್ಯೂಟಿ ನಾಯಕ ಸ್ಥಾನದಿಂದ ರಾಘವ್ ಚಡ್ಡಾರನ್ನು ಕಿತ್ತು ಹಾಕಿದೆ. ಇಷ್ಟೇ ಅಲ್ಲ, ರಾಜ್ಯಸಭೆಯಲ್ಲಿ ರಾಘವ್ ಚಡ್ಡಾಗೆ ಮಾತನಾಡಲು ಸಮಯ ನೀಡಿದಂತೆ ಆಫ್ ಸಭೆಗೆ ಸೂಚಿಸಿದೆ. ರಾಘವ್ ಚಡ್ಡಾ ನಡೆಗೆ ಆಪ್ ಗರಂ
ರಾಘವ್ ಚಡ್ಡಾ ಇತ್ತೀಚೆಗೆ ಆಪ್ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪ್ರಮುಖ ನಾಯಕರು ಜೈಲಿಗೆ ಹೋದಾಗ, ಜೈಲಿನಿಂದ ಬಿಡುಗಡೆಯಾದಾಗಲೂ ಕೇಂದ್ರದ ವಿರುದ್ದ ಬಿಜೆಪಿ ವಿರುದ್ಧ ಯಾವುದೇ ಮಾತು ಆಡಲಿಲ್ಲ.
ಇಷ್ಟೇ ಅಲ್ಲ ಕೇಜ್ರಿವಾಲ್ ಸೇರಿದಂತೆ ಆಪ್ ನಾಯಕರ ಪರವಾಗಿ ಒಂದು ಮಾತು ಆಡಿಲ್ಲ ಎಂದು ಆಪ್ ಆಕ್ರೋಶಗೊಂಡಿತ್ತು. ಆಪ್ ನಾಯಕರಿಂದ ದೂರ ಉಳಿದುಕೊಂಡಿರುವ ರಾಘವ್ ಚಡ್ಡಾ ನಡೆಯಿಂದ ಆಪ್ ಕೆರಳಿ ಕೆಂಡಾಮಂಡಲವಾಗಿದೆ ಎಂಬ ಮಾತುಗಳ ಕೇಳಿಬಂದಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಆಪ್ ನಡೆ ಅಚ್ಚರಿ ಮೂಡಿಸಿದೆ. ರಾಜ್ಯಸಭೆಯ ಡೆಪ್ಯೂಟಿ ನಾಯಕ ಸ್ಥಾನದಿಂದ ರಾಘವ್ ಚಡ್ಡಾ ಕಿತ್ತು ಹಾಕಿದ ಆಮ್ ಆದ್ಮಿ ಪಾರ್ಟಿ, ಇದೀಗ ಈ ಸ್ಥಾನಕ್ಕೆ ಅಶೋಕ್ ಮಿತ್ತಲ್ ಹೆಸರನ್ನು ನಾಮನಿರ್ದೇಶಿಸಿದೆ.
ರಾಘವ್ ಚಡ್ಡಾಗೆ ಆಪ್ ಗೂಗ್ಲಿ
ಸಂಸತ್ ಕಾರ್ಯದರ್ಶಿ ಈ ಬದಲಾವಣೆಯನ್ನು ಆದಷ್ಟು ಬೇಗ ಅಂಗೀಕರಿಸಬೇಕು ಎಂದು ಆಪ್ ಮನವಿ ಮಾಡಿದೆ. ರಾಜ್ಯಸಭೆಯಲ್ಲಿ 10 ಸಂಸದರನ್ನು ಹೊಂದಿದೆ. 7 ಸಂಸದರು ಪಂಜಾಬ್‌ನಿಂದ ಹಾಗೂ ಮೂವರು ಸಂಸದರು ದೆಹಲಿಯಿಂದ ಇದ್ದಾರೆ. 2022ರಲ್ಲಿ ರಾಘವ್ ಚಡ್ಡಾ ರಾಜ್ಯಸಭೆಯ ಅತ್ಯಂತ ಕಿರಿಯ ಸಂಸದ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದರು.