... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಕುಮಾರಸ್ವಾಮಿ-ಲೋಕಾಯುಕ್ತ ಎಡಿಜಿಪಿ ಜಟಾಪಟಿ ಕ್ಲೈಮ್ಯಾಕ್ಸ್ ಹಂತಕ್ಕೆ:

ಕುಮಾರಸ್ವಾಮಿ-ಲೋಕಾಯುಕ್ತ ಎಡಿಜಿಪಿ ಜಟಾಪಟಿ ಕ್ಲೈಮ್ಯಾಕ್ಸ್ ಹಂತಕ್ಕೆ: ರಾಜಿ ಸಂಧಾನಕ್ಕೆ ಸಮ್ಮತಿ

ಭಾರೀ ಸಂಚಲನ ಮೂಡಿಸಿದ್ದ ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್‌ ಅವರಿಗೆ ಮತ್ತು ಅವರ ಕುಟುಂಬಕ್ಕೆ ಕೇಂದ್ರ ಸಚಿವ ಎಚ್​ ಡಿ ಕುಮಾರಸ್ವಾಮಿ ಬೆದರಿಕೆ ಹಾಕಿರುವ ಪ್ರಕರಣ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಕರ್ನಾಟಕ ಹೈಕೋರ್ಟ್​ ಸಲಹೆ ಮೇರೆಗೆ ಈ ಪ್ರಕರಣ ​ರಾಜಿ ಸಂಧಾನ ಹಂತಕ್ಕೆ ಬಂದಿದೆ. ಹಾಗಾದ್ರೆ, ಕೋರ್ಟ್​ ಹೇಳಿದ್ದೇನು? ಏನಿದು ಪ್ರಕರಣ ಎನ್ನುವ ವಿವರ ಇಲ್ಲಿದೆ. ಬೆಂಗಳೂರು,  ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್‌ (Lokayukta AdGP Chandrashekhar) ಅವರಿಗೆ ಮತ್ತು ಅವರ ಕುಟುಂಬಕ್ಕೆ ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ (hd kumaraswamy) ಬೆದರಿಕೆ ಹಾಕಿರುವ ಪ್ರಕರಣ ರಾಜಿ ಸಂಧಾನ ಮಾತುಕತೆ ಹಂತಕ್ಕೆ ಬಂದಿದೆ. 

ಹೌದು.. ಹೈಕೋರ್ಟ್ ಸಲಹೆಯಂತೆ ಆರೋಪಿ ಎಚ್​.ಡಿ.ಕುಮಾರಸ್ವಾಮಿ ಹಾಗೂ ದೂರುದಾರ ಚಂದ್ರಶೇಖರ್ ರಾಜಿ ಸಂಧಾನದ ಮಾತುಕತೆಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಹೈಕೋರ್ಟ್ (Karnataka High Court)​.ರಾಜಿ ಸಂಧಾನಕ್ಕೆ ಸೂಕ್ತ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು ಎಂದು ಹೇಳಿದ್ದು, ಹಾಜರಾಗಬೇಕಾದ ದಿನಾಂಕ, ಸ್ಥಳವನ್ನು ತಿಳಿಸಲಾಗುವುದು ಎಂದು ಇಬ್ಬರು ಕಡೆ ವಕೀಲರಿಗೆ ಹೇಳಿ ವಿಚಾರಣೆಯನ್ನು ಏಪ್ರಿಲ್ 30ಕ್ಕೆ ಮುಂದೂಡಿದೆ. ಸುದ್ದಿಗೋಷ್ಠಿಯಲ್ಲಿ ಸಾಲು ಸಾಲು ಆರೋಪ ಮಾಡಿರುವ ಸಂಬಂಧ ಎಂ ಚಂದ್ರಶೇಖರ್ ಅವರು ಕುಮಾರಸ್ವಾಮಿ ವಿರುದ್ಧ ಬೆದರಿಕೆ ಪ್ರಕರಣ ದಾಖಲಿಸಿದ್ದರು. 

ಬಳಿಕ ಪ್ರಕರಣ ರದ್ದುಕೋರಿ ಕುಮಾರಸ್ವಾಮಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು ಹೈಕೋರ್ಟ್ ಸಹ ಈ ಅರ್ಜಿಯನ್ನು ಹಲವು ಬಾರಿ ವಿಚಾರಣೆ ನಡೆಸಿದೆ. ಕೊನೆಗೆ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ ಎಂದು ಕುಮಾರಸ್ವಾಮಿ ಹಾಗೂ ಚಂದ್ರಶೇಖರ್ ಪರ ವಕೀಲರಿಗೆ ಸಲಹೆ ನೀಡಿತ್ತು. ಅದರಂತೆ ಇದೀಗ ರಾಜಿ ಸಂಧಾನ ಮಾತುಕತೆಗೆ ಇಬ್ಬರು ಕಡೆ ವಕೀಲರು ಸಮ್ಮಿತಿಸಿದ್ದಾರೆ. ಇದರಿಂದ ಕೋರ್ಟ್, ರಾಜಿ ಸಂಧಾನಕ್ಕೆ ಸೂಕ್ತ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು. ಹಾಜರಾಗಬೇಕಾದ ದಿನಾಂಕ, ಸ್ಥಳವನ್ನು ತಿಳಿಸಲಾಗುವುದು ಎಂದು ಎರಡೂ ಕಡೆ ವಕೀಲರಿಗೆ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಪೀಠ ಸೂಚಿಸಿ ವಿಚಾರಣೆ ಏಪ್ರಿಲ್ 30ಕ್ಕೆ ಮುಂದೂಡಿದೆ.

Source : TV9 Kannada

1 hour ago

Home Flash News