... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಕೊನೆಗೂ ಆಂಧ್ರ ಪ್ರದೇಶಕ್ಕೆ ಸಿಕ್ತು ರಾಜಧಾನಿ!

Andhra Pradesh Capital: ಕೊನೆಗೂ ಆಂಧ್ರ ಪ್ರದೇಶಕ್ಕೆ ಸಿಕ್ತು ರಾಜಧಾನಿ! ರಾಜ್ಯ ರಚನೆಯಾಗಿ 12 ವರ್ಷಗಳ ಬಳಿಕ ಸಿಕ್ತು ಅಧಿಕೃತ ಮುದ್ರೆ

ನವದೆಹಲಿ: 2014ರಲ್ಲಿ ಆಂಧ್ರಪ್ರದೇಶ (Andhra Pradesh) ವಿಭಜನೆಯಾಗಿ ತೆಲಂಗಾಣ (Telangana) ಉದಯವಾದಾಗ, ಹೈದರಾಬಾದ್ (Hyderabad) ಅನ್ನು 10 ವರ್ಷಗಳ ಕಾಲ ಜಂಟಿ ರಾಜಧಾನಿಯಾಗಿ ಘೋಷಿಸಲಾಗಿತ್ತು. ಆದರೆ, ಈ ಅವಧಿಯು ಮುಕ್ತಾಯಗೊಳ್ಳುತ್ತಿದ್ದಂತೆ ಆಂಧ್ರದ ಸ್ವಂತ ರಾಜಧಾನಿ (Capital) ಯಾವುದು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇನ್ನು ಕಳೆದ 12 ವರ್ಷಗಳ ಅವಧಿಯಲ್ಲಿ ಆಂಧ್ರಪ್ರದೇಶದ ರಾಜಧಾನಿಯಾಗಿ (Capital of Andhra Pradesh) 3-4 ನಗರಗಳನ್ನು ಹೆಸರಿಸಲಾಗಿತ್ತು. ಆದರೆ, ಅದರಲ್ಲಿ ಯಾವುದೂ ಸಹ 5 ವರ್ಷಕ್ಕಿಂತ ಹೆಚ್ಚಿನ ಕಾಲ ಉಳಿಯಲೇ ಇಲ್ಲ! ಆದರೆ, ಇದೀಗ ಸತತ 12 ವರ್ಷಗಳ ಕಾಯುವಿಕೆಯ ನಂತರ ಆಂಧ್ರ ಪ್ರದೇಶಕ್ಕೆ ಸುದೀರ್ಘ ರಾಜಕೀಯ ಅನಿಶ್ಚಿತತೆಯ ನಂತರ ಕೊನೆಗೂ ಒಂದು ರಾಜಧಾನಿ ಫೈನಲ್ ಆಗಿದೆ. 

ಆ ಕುರಿತ ವರದಿ ಇಲ್ಲಿದೆ. ಆಂಧ್ರ ಪ್ರದೇಶದ ರಾಜಧಾನಿಯಾಗಿ ಟಿಡಿಪಿ ನಾಯಕ ಹಾಗೂ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕನಸಿನ ನಗರಿ ಅಮರಾವತಿಯನ್ನು ಇಂದು ಕಾನೂನುಬದ್ಧವಾಗಿ ಆಂಧ್ರಪ್ರದೇಶದ ಏಕೈಕ ಹಾಗೂ ಶಾಶ್ವತ ರಾಜಧಾನಿ ಎಂದು ಘೋಷಣೆ ಮಾಡಲಾಗಿದೆ. ಇನ್ನು ರಾಜಧಾನಿಯ ನಿರ್ಮಾಣಕ್ಕಾಗಿ ಸಾವಿರಾರು ರೈತರು ಸುಮಾರು 33,000 ಎಕರೆ ಭೂಮಿಯನ್ನು ಹೊಸ ಯೋಜನೆಗೆಂದು ಸರ್ಕಾರಕ್ಕೆ ನೀಡಿದರು. ಅದರಂತೆ, 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮರಾವತಿ ನಗರಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಆದರೆ, 2019 ರ ವಿಧಾನಸಭಾ ಚುನಾವಣೆಯಲ್ಲಿ ವೈ.ಎಸ್.

 ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ತಕ್ಷಣ ಅಮರಾವತಿಯನ್ನು ಏಕೈಕ ರಾಜಧಾನಿ ಮಾಡುವ ನಿರ್ಧಾರವನ್ನು ಕೈಬಿಟ್ಟಿತು. ಅದರ ಬದಲು ವಿಕೇಂದ್ರೀಕರಣದ ನೆಪದಲ್ಲಿ ಮೂರು ರಾಜಧಾನಿಗಳ ಯೋಜನೆಯನ್ನು ಘೋಷಿಸಿ, ಶಾಸಕಾಂಗದ ರಾಜಧಾನಿಯಾಗಿ ಅಮರಾವತಿ, ಕಾರ್ಯಾಂಗ ರಾಜಧಾನಿಯಾಗಿ ವಿಶಾಖಪಟ್ಟಣಂ ಹಾಗೂ ನ್ಯಾಯಾಂಗದ ರಾಜಧಾನಿಯಾಗಿ ಕರ್ನೂಲ್ ಅನ್ನು ಘೋಷಣೆ ಮಾಡಿದರು. ಇದರ ಪರಿಣಾಮ ಅಮರಾವತಿ ಭಾಗದ ರೈತರು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಆರಂಭಿಸಿದರು. ಸಾವಿರಾರು ದಿನಗಳ ಕಾಲ ನಡೆದ ಈ ಪ್ರತಿಭಟನೆಯು ಸುದೀರ್ಘ ಕಾನೂನು ಹೋರಾಟಕ್ಕೂ ಕಾರಣವಾಯಿತು.

Source : News18 Kannada

1 hour ago

Home Flash News