... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಅಮೆರಿಕ ದಾಳಿ ಬೆನ್ನಲ್ಲೇ ಕೊಲ್ಲಿಯ 8 ಸೇತುವೆಗಳ ಹಿಟ್ ಲಿಸ್ಟ್ ಪ್ರಕಟಿಸಿದ ಇರಾನ್

ಅಮೆರಿಕ ದಾಳಿ ಬೆನ್ನಲ್ಲೇ ಕೊಲ್ಲಿಯ 8 ಸೇತುವೆಗಳ ಹಿಟ್ ಲಿಸ್ಟ್ ಪ್ರಕಟಿಸಿದ ಇರಾನ್

ಟೆಹರಾನ್: ಕೊಲ್ಲಿ ರಾಷ್ಟ್ರಗಳಲ್ಲಿ ಎಂಟು ಸೇತುವೆಗಳ 'ಹಿಟ್ ಲಿಸ್ಟ್' ಅನ್ನು ಇರಾನ್ ಪ್ರಕಟಿಸಿದೆ. ಇರಾನ್‌ನ ಸೇತುವೆ ಸೇರಿದಂತೆ ಮೂಲಸೌಕರ್ಯಗಳ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯ ಬೆನ್ನಲ್ಲೇ ಪ್ರತೀಕಾರ ತೀರಿಸುವುದಾಗಿ ಇರಾನ್ ಬೆದರಿಕೆ ಹಾಕಿದೆ. ಇರಾನ್‌ನ ಅತಿ ಎತ್ತರದ ಬಿ1 ಸೇತುವೆಯ ಮೇಲೆ ದಾಳಿ ನಡೆಸಿ ಧ್ವಂಸ ನಡೆಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಗಲ್ಫ್ ರಾಷ್ಟ್ರಗಳು ಹಾಗೂ ಜಾರ್ಡನ್‌ನ ಪ್ರಮುಖ ಸೇತುವೆಗಳನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗುರಿಯಾಗಿಸಿದೆ ಎಂದು ಇರಾನ್‌ನ ಅರೆ-ಸರ್ಕಾರಿ ಫಾರ್ಸ್ ನ್ಯೂಸ್ ಏಜೆನ್ಸಿ ತಿಳಿಸಿದೆ. ವರದಿಯ ಪ್ರಕಾರ, ಕುವೈತ್‌ನ ಶೇಖ್ ಬಾಬರ್ ಅಲ್-ಅಹ್ಮದ್ ಅಲ್-ಸಬಾ ಸಮುದ್ರ ಸೇತುವೆ, ಯುಎಇಯಲ್ಲಿ ಶೇಖ್ ಜಾಯೇದ್ ಸೇತುವೆ, ಅಲ್ ಮಖ್ತಾ ಸೇತುವೆ, ಶೇಖ್ ಖಲೀಫಾ ಸೇತುವೆ, ಸೌದಿ ಅರೇಬಿಯಾದಿಂದ ಬಹರೇನ್ ಸಂಪರ್ಕಿಸುವ ಕಿಂಗ್ ಫಹದ್ ಕಾಸ್‌ವೇ ಮತ್ತು ಜಾರ್ಡನ್‌ನಲ್ಲಿ ಕಿಂಗ್ ಹುಸೇನ್ ಸೇತುವೆ, ದಾಮಿಯಾ ಸೇತುವೆ ಮತ್ತು ಅಬ್ದೌನ್ ಸೇತುವೆಗಳು ಇರಾನ್‌ನ ಹಿಟ್ ಲಿಸ್ಟ್‌ನಲ್ಲಿವೆ.

Source : Prajavani

1 hour ago

Home Flash News