... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಎಂ.ಬಿ.ಪಾಟೀಲ್ vs ಯತ್ನಾಳ್‌; ಬಸನಗೌಡ ಯತ್ನಾಳ್‌ ಸ್ವಾಭಿಮಾನ ಎಲ್ಲಿ ಹೋಯ್ತು?:

ಎಂ.ಬಿ.ಪಾಟೀಲ್ vs ಯತ್ನಾಳ್‌; ಬಸನಗೌಡ ಯತ್ನಾಳ್‌ ಸ್ವಾಭಿಮಾನ ಎಲ್ಲಿ ಹೋಯ್ತು?: ಎಂ.ಬಿ.ಪಾಟೀಲ್

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಮರಳಿ ಬಿಜೆಪಿ ಸೇರುವ ಸಲುವಾಗಿ ಬಾಗಲಕೋಟೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರ ಮಾಡುವ ನಾಟಕ ಮಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಟೀಕಿಸಿದರು. ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿಯಲ್ಲಿ ಅಪಮಾನ ಮಾಡಿ ಯತ್ನಾಳ್ ಅವರನ್ನು ಹೊರಹಾಕಲಾಗಿದೆ. ಈಗ ಮಾನ-ಮರ್ಯಾದೆ ಬಿಟ್ಟು ಪ್ರಚಾರಕ್ಕೆ ಹೋಗಿದ್ದಾರೆ. ಹಾಗಾದರೆ, ಯತ್ನಾಳ್ ಸ್ವಾಭಿಮಾನ ಎಲ್ಲಿ ಹೋಯ್ತು? ಸುಮ್ಮನೆ ನನ್ನನ್ನು ಬಿಜೆಪಿಗೆ ವಾಪಸ್ ತೆಗೆದುಕೊಳ್ಳಿ ಅಂತಾ ಯತ್ನಾಳ್ ಕೈಮುಗಿದು ಕೇಳಿಕೊಳ್ಳಲಿ ಎಂದರು. ಅಲ್ಲದೇ, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಗ ವಿಜಯೇಂದ್ರ ವಿರುದ್ಧ ಯತ್ನಾಳ್ ಮಾತನಾಡುತ್ತಾರೆ. ಬಾಗಲಕೋಟೆ ಅಭ್ಯರ್ಥಿ ಚರಂತಿಮಠ ಅವರು ಯಡಿಯೂರಪ್ಪ ಹಾಗೂ ಗೋವಿಂದ ಕಾರಜೋಳ ಬಣದವರು. 

ಇವರ ಬಣದವರ ಪ್ರಚಾರಕ್ಕೆ ಯತ್ನಾಳ್ ಹೊರಟಿದ್ದಾರೆ. ಅದೇ ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಬಣವಲ್ಲ, ಮಾಜಿ ಸಂಸದ ಸಿದ್ದೇಶ್ವರ ಬಣದವರು. ಯಡಿಯೂರಪ್ಪ ಅವರಿಗೆ ಹೇಳದೇ ಅಲ್ಲಿ ಬಿಜೆಪಿ ಟಿಕೆಟ್ ನೀಡಲಾಗಿದೆ. ಹೀಗಾಗಿ ಯತ್ನಾಳ ಸುಮ್ಮನೇ ನಾಟಕ ಮಾಡುತ್ತಿದ್ದಾರೆ ಎಂದರು. ಎಂ.ಬಿ.ಪಾಟೀಲ್‌ ಜತೆ ಸೇರಿ ನಮಾಜ್‌ ಮಾಡಿದ್ದೆ; ಅದಕ್ಕೆ ಪಶ್ಚಾತಾಪ ಪಟ್ಟಿದ್ದೇನೆ: ಬಸನಗೌಡ ಯತ್ನಾಳ್‌ ಬಾಗಲಕೋಟೆ: ನಾನು ಸಚಿವ ಎಂ.ಬಿ.ಪಾಟೀಲ್‌ ಜತೆಗೂಡಿ ಹಿಂದೆ ನಮಾಜ್‌ ಮಾಡಿದ್ದು ನಿಜ. ಆದರೆ, ಅದಕ್ಕೆ ನಾನು ಪಶ್ಚಾತ್ತಾಪ ಪಟ್ಟಿದ್ದೇನೆ. ಆದರೂ ಜೈ ಶ್ರೀರಾಮ ಅನ್ನೋದು ಯಾವಾಗಲೂ ನನ್ನಲ್ಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಲಿಂಗಾಯತ ಒಳ ಪಂಗಡದ ಪ್ರಮುಖರ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ನಾನು ಮತ್ತು ಯತ್ನಾಳ್‌ ಕೂಡಿಯೇ ನಮಾಜ್‌ ಮಾಡಿದ್ದೇವೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ. 

ಹೌದು, ನಾವು ನಮಾಜ್‌ ಮಾಡಿದ್ದೇವೆ. ಆದರೆ, ಅದಕ್ಕೆ ನಾನು ಪಶ್ಚಾತ್ತಾಪ ಪಟ್ಟಿದ್ದೇನೆ. ಜೈ ಶ್ರೀರಾಮ್ ಅನ್ನೋದು ಯಾವಾಗಲೂ ನನ್ನಲ್ಲಿದೆ. ಬರೀ ಅದೇ ಕಥೆ ಹೇಳೋದು ಬೇಡ. ಎಂ.ಬಿ.ಪಾಟೀಲ್‌ ಸೋಲಿಸಲು ವಿಜಯಪುರದಲ್ಲಿ ಒಬ್ಬ ಮಂತ್ರಿ ಕೆಲಸ ಮಾಡಿದ್ದಾರೆ. ಮೊದಲು ಮುಂದಿನ ಬಾರಿ ಅವರನ್ನು ಸೋಲಿಸಲಿ ಎಂದರು. ಕಷ್ಟದಲ್ಲಿದ್ದಾಗ ಚರಂತಿಮಠ ಸಹಾಯ: ನಾನು ಬಿಜೆಪಿಲ್ಲಿ ಇದ್ದವನು. ಯಾವ್ಯಾವುದೋ ಕಾರಣದಿಂದ ಉಚ್ಚಾಟನೆ ಆಗಿರಬಹುದು. ಉಚ್ಚಾಟನೆ ಆದರೂ ಸಹಿತ ನಾನು ಮತ್ತು ಚರಂತಿಮಠ ಆತ್ಮೀಯರಾಗಿದ್ದೇವೆ. ಎಲ್ಲರ ಜತೆ ಒಳ್ಳೆಯ ಸಂಬಂಧವಿದೆ. ನಾನು ಪಕ್ಷ ವಿರೋಧಿ ಮತ್ತು ಬ್ಲ್ಯಾಕ್‌ಮೇಲ್‌ ಸ್ವಭಾವದವನಲ್ಲ. ಕಾಂಗ್ರೆಸ್‌ನಿಂದ ಯಾವುದೇ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ. ಚರಂತಿಮಠ ಹಾಗೂ ನಮ್ಮದು ವೈಯಕ್ತಿಕವಾಗಿ ಒಳ್ಳೆಯ ಸಂಬಂಧವಿದೆ. 

ನಮಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಾರೆ. ಆರ್ಥಿಕ ಸಹಾಯ ಕೂಡ ಮಾಡಿದ್ದಾರೆ. ಆ ಕಾರಣಕ್ಕೆ ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ‌ ಎಂದರು. ಬಿಜೆಪಿಗೆ ದ್ರೋಹ ಮಾಡುವವನಲ್ಲ: ಮಾನ-ಮರ್ಯಾದೆ ಇದ್ದರೆ ಬಿಜೆಪಿ ಪರ ಪ್ರಚಾರಕ್ಕೆ ಬರಬಾರದು ಎಂದು ಕೆಲವರು ಹೇಳಿದ್ದಾರೆ. ಇವರ ಸ್ವಾಭಿಮಾನ, ಮಾನ-ಮರ್ಯಾದೆ ಏನು ಅಂತ ನನಗೆ ಗೊತ್ತಿದೆ. ನಾನು ಎಂದೂ ಬಿಜೆಪಿಗೆ ದ್ರೋಹ ಮಾಡುವ ಕೆಲಸ ಮಾಡಲ್ಲ. ನಾನು ಬಿಜೆಪಿಯಿಂದ ಶಾಸಕ ಆದವನು ಎಂದು ಹೇಳಿದರು. ಐಪಿಎಲ್ ಟಿಕೆಟ್ ಕೇಳಿದ ಶಾಸಕ ಕಾಶಪ್ಪನವರ್‌ಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ಶಾಸಕರಾದವರು ಐಪಿಎಲ್ ಟಿಕೆಟ್ ಕೇಳ್ತಾರಾ? ಸಮಾಜದ ಪರವಾಗಿ ಮಾತಾಡೋದು ಬಿಟ್ಟು ಐಪಿಎಲ್ ಟಿಕೆಟ್ ಕೇಳ್ತಾರೆ. ಹಿಂದೊಮ್ಮೆ ಸದನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಬೇಕು ಎಂದು ಮಾತಾಡಿದ್ದರು. ಸಿದ್ದರಾಮಯ್ಯ ಕ್ಲಾಸ್ ತಗೋಂಡ್ರು, ಆಗ ಎಸ್ಕೇಪ್ ಆದರು. ಸ್ಪೀಕರ್ ಖಾದರ್ ಅವ್ರು ಕ್ಯಾಶಪ್ಪನವರ್ ಕ್ಯಾಶಪ್ಪನವರ್ ಎಂದು ಕೂಗಿದ್ರೂ ಬರಲಿಲ್ಲ ಎಂದರು.

Source : Udayavani

1 hour ago

Home Flash News