Iran Missle Attack: 30000 ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಿದ್ದ ಪ್ರಸಿದ್ಧ ಕಂಪನಿ ಮೇಲೆ ಇರಾನ್ ಮಿಸೈಲ್ ದಾಳಿ!
ನವದೆಹಲಿ: ವಿಶ್ವಾದ್ಯಂತ 30,000 ಜನರನ್ನು (Iran Attacks Oracle) ಕೆಲಸದಿಂದ ತೆಗೆದುಹಾಕಿದ್ದ ಪ್ರಸಿದ್ಧ ಟೆಕ್ ಕಂಪನಿಯ ಕಚೇರಿಯ ಮೇಲೆ ಇರಾನ್ ಕ್ಷಿಪಣಿ ದಾಳಿ (Iran Missile Attack) ನಡೆಸಿದೆ.
ಇರಾನ್ ಅಮೆರಿಕದ ಐಟಿ ಕಂಪನಿ ಒರಾಕಲ್ ಕಚೇರಿಯ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದ್ದು, ಈ ಕಂಪನಿಯು ಅಮೇರಿಕನ್ ಮೂಲದ್ದು ಆಗಿದ್ದು, ಹೀಗಾಗಿ ಒರಾಕಲ್ ಕಂಪನಿಯ ದುಬೈ ಕಚೇರಿಯ ಮೇಲೆ ಇರಾನ್ ದಾಳಿ ನಡೆಸಿದೆ. ಟೆಕ್ ಕಂಪನಿ ಒರಾಕಲ್ ಕಟ್ಟಡದ ಮೇಲೆ ಇರಾನಿನ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ದುಬೈ ಅಧಿಕಾರಿಗಳು ಸ್ವತಃ ದೃಢಪಡಿಸಿದ್ದಾರೆ. ಇತ್ತೀಚೆಗೆ ಭಾರತದ 12000 ಉದ್ಯೋಗಿಗಳು ಸಹಿತ ವಿಶ್ವಾದ್ಯಂತ 30,000 ಉದ್ಯೋಗಿಗಳನ್ನು ಕೆಲಸದಿಂದ ಒರಾಕಲ್ ಕಂಪನಿ ತೆಗೆದು ಹಾಕಿತ್ತು ಅನ್ನೋದು ಗಮನಾರ್ಹ.
ದುಬೈ ಮಾಧ್ಯಮ ಕಚೇರಿಯು X ನಲ್ಲಿ ಕ್ಷಿಪಣಿ ದಾಳಿಯ ಕುರಿತು ಪೋಸ್ಟ್ ಮಾಡಿದೆ. ವರದಿಯ ಪ್ರಕಾರ, ದುಬೈ ಇಂಟರ್ನೆಟ್ ಸಿಟಿಯಲ್ಲಿರುವ ಒರಾಕಲ್ ಕಟ್ಟಡದ ಮುಂಭಾಗದ ಮೇಲೆ ವೈಮಾನಿಕ ದಾಳಿ ನಡೆದಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಕಟ್ಟಡದ ಅವಶೇಷಗಳು ಪತ್ತೆಯಾಗಿದ್ದು, ತೀರಾ ದೊಡ್ಡ ಮಟ್ಟದ ದಾಳಿ ಇದಲ್ಲ ಎಂದು ಹೇಳಲಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್, ಯಾವುದೇ ಗಾಯಗಳು ಆದ ಬಗ್ಗೆ ವರದಿಯಾಗಿಲ್ಲ. ಪ್ರಸ್ತುತ, ಇರಾನ್ ಡ್ರೋನ್-ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂದು ದುಬೈ ಹೇಳಿಕೊಂಡಿದೆ. ಯುಎಇ ಕೊಲ್ಲಿಯಲ್ಲಿ ಅಮೆರಿಕದ ಮಿತ್ರ ರಾಷ್ಟ್ರವಾಗಿದ್ದು, ಅಮೆರಿಕದ ಮಿಲಿಟರಿ ನೆಲೆಯನ್ನು ಹೊಂದಿದೆ ಎಂಬುದನ್ನು ಗಮನಿಸಬೇಕು. ಆದ್ದರಿಂದ, ಇರಾನ್ ದುಬೈ ಮೇಲೆ ಬಾಂಬ್ ದಾಳಿ ನಡೆಸುತ್ತಲೇ ಇದೆ.