ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಬೇಕು ಅನ್ನೋರಿಗೆ ಬಿಡಿಎ ಭರ್ಜರಿ ಗುಡ್‌ನ್ಯೂಸ್
ನಗರದ ಡಿಮ್ಯಾಂಡ್ ಇರುವ ಕಡೆಗಳಲ್ಲೇ ಈ ಪ್ರಾಜೆಕ್ಟ್‌ಗಳು ಬರ್ತಿವೆ. ಎಲೆಕ್ಟ್ರಾನಿಕ್ಸ್ ಸಿಟಿ, ಕೊನದಾಸಪುರ, ಕಾಳತಮ್ಮನಹಳ್ಳಿ ಮತ್ತು ಕೆಂಚನಪುರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬಿಡಿಎ ಈ ಅಪಾರ್ಟ್‌ಮೆಂಟ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಇರಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಆದ್ರೆ ಬೆಂಗಳೂರಿನಲ್ಲಿ ಸೈಟ್ ಅಥವಾ ಫ್ಲಾಟ್ ರೇಟ್ ಕೇಳಿದ್ರೆ ಸಾಕು, ಸಾಮಾನ್ಯ ಜನ ಬೆಚ್ಚಿಬೀಳ್ತಾರೆ. ಆದ್ರೆ ಇವತ್ತು ನಿಮ್ಮ ಈ ಕನಸನ್ನ ನನಸು ಮಾಡೋಕೆ ಬಿಡಿಎ ಅಂದ್ರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಂದು ಭರ್ಜರಿ ಆಫರ್ ತಂದಿದೆ!
ಬಿಡಿಎ ಇಂದ 4000 ಫ್ಲಾಟ್‌ಗಳ ಗಿಫ್ಟ್!
ಹೌದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಗರದ ಆರು ಪ್ರಮುಖ ಲೇಔಟ್‌ಗಳಲ್ಲಿ ಬರೋಬ್ಬರಿ 4,000 ಕ್ಕೂ ಹೆಚ್ಚು ಫ್ಲಾಟ್‌ಗಳನ್ನು ಮಾರಾಟ ಮಾಡೋಕೆ ಸಿದ್ಧತೆ ಮಾಡಿಕೊಳ್ತಿದೆ. ಸುಮಾರು 3,200 ಕೋಟಿ ರೂಪಾಯಿ ಮೌಲ್ಯದ ಈ ಬೃಹತ್ ವಸತಿ ಯೋಜನೆಗಳು ಈಗ ನಿರ್ಮಾಣ ಹಂತದಲ್ಲಿದ್ದು, ಈ ವರ್ಷದ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಇವುಗಳನ್ನ ಹಂತ ಹಂತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡೋದು ಬಿಡಿಎ ಪ್ಲಾನ್!
ಯಾವೆಲ್ಲಾ ಏರಿಯಾಗಳಲ್ಲಿ ಈ ಫ್ಲಾಟ್‌ಗಳು ಸಿಗಲಿವೆ?
ನಗರದ ಡಿಮ್ಯಾಂಡ್ ಇರುವ ಕಡೆಗಳಲ್ಲೇ ಈ ಪ್ರಾಜೆಕ್ಟ್‌ಗಳು ಬರ್ತಿವೆ.
ಎಲೆಕ್ಟ್ರಾನಿಕ್ಸ್ ಸಿಟಿ, ಕೊನದಾಸಪುರ, ಕಾಳತಮ್ಮನಹಳ್ಳಿ ಮತ್ತು ಕೆಂಚನಪುರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬಿಡಿಎ ಈ ಅಪಾರ್ಟ್‌ಮೆಂಟ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇಲ್ಲಿ ಬರೀ ಚಿಕ್ಕ ಮನೆಗಳಲ್ಲ, ನಿಮ್ಮ ಅವಶ್ಯಕತೆಗೆ ತಕ್ಕಂತೆ 1 BHK, 2BHK, 3 BHK ಹಾಗು 4 BHK ಫ್ಲಾಟ್ ಗಳು ಇರಲಿವೆ. ಅಂದ್ರೆ ಬ್ಯಾಚುಲರ್ಸ್ ಇಂದ ಹಿಡಿದು ದೊಡ್ಡ ಫ್ಯಾಮಿಲಿ ವರೆಗೂ ಎಲ್ಲರಿಗೂ ಇಲ್ಲಿ ಚಾಯ್ಸ್ ಇದೆ!
ಕೊನದಾಸಪುರದಲ್ಲಿ ಬೃಹತ್ ವಸತಿ ಸಮುಚ್ಚಯ!
ವಿಶೇಷವಾಗಿ ಕೊನದಾಸಪುರದಲ್ಲಿ ಹಂತ 1 ರ ಅಡಿಯಲ್ಲಿ ಬರೋಬ್ಬರಿ 1,928 ಫ್ಲಾಟ್‌ಗಳು ನಿರ್ಮಾಣವಾಗ್ತಿವೆ. ಇದರಲ್ಲಿ 480 2BHK ಮತ್ತು 1,448 3BHK ಮನೆಗಳು ಇರುತ್ತವೆ. ಅಂದ್ರೆ ದೊಡ್ಡ ಲೇಔಟ್‌ನಲ್ಲಿ ಸಕಲ ಸೌಲಭ್ಯಗಳೊಂದಿಗೆ ವಾಸ ಮಾಡಬೇಕು ಅನ್ನೋರಿಗೆ ಇದು ಬೆಸ್ಟ್ ಆಪ್ಷನ್ ಅಂತಾನೇ ಹೇಳಬಹುದು.