ಬೆಂಗಳೂರಲ್ಲಿ ಒಂದೇ ದಿನ 13,000 ಎಲೆಕ್ಟ್ರಿಕ್ ವಾಹನ ನೋಂದಣಿ, ಎಲ್ಲರೂ ಇವಿ ಖರೀದಿಗೆ ಇದೆ ಕಾರಣ
ಬೆಂಗಳೂರಲ್ಲಿ ಒಂದೇ ದಿನ 13,000 ಎಲೆಕ್ಟ್ರಿಕ್ ವಾಹನ ನೋಂದಣಿ, ಎಲ್ಲರೂ ಇವಿ ಖರೀದಿಗೆ ಇದೆ ಕಾರಣ, ಇದು ಅತ್ಯಧಿಕ ದಾಖಲೆಯಾಗಿದೆ. ಅಷ್ಟಕ್ಕೂ ಬೆಂಗಳೂರಲ್ಲಿ ಇವಿ ಖರೀದಿ ಹೆಚ್ಚಾಗಲು ಕಾರಣವೇನು? ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ತುಸು ಹೆಚ್ಚಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಭಾರಿ ಬದಲಾವಣೆ ಕಾಣುತ್ತಿದೆ. ವಿಶೇಷ ಅಂದರೆ ಒಂದೇ ದಿನ ಬೆಂಗಳೂರಿನಲ್ಲಿ ಬರೋಬ್ಬರಿ 13 ಸಾವಿರ ಎಲೆಕ್ಟ್ರಿಕ್ ವಾಹನಗಳು ರಿಜಿಸ್ಟ್ರೇಶನ್ ಆಗಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಅಷ್ಟಕ್ಕೂ ಜನರು ದಿಢೀರ್ ಇವಿ ವಾಹನ ಮೊರೆ ಹೋಗಲು ಎರಡು ಕಾರಣಗಳಿವೆ.
ಮಾರ್ಚ್ 31ರಂದು ಬೆಂಗಳೂರಿನಲ್ಲಿ 13 ಸಾವಿರ ಇವಿ ವಾಹನಗಳು ನೋಂದಣಿಯಾಗಿದೆ. 11 ವಿವಿಧ ಆರ್‌ಟಿಒ ಕಚೇರಿಗಳಲ್ಲಿ ಈ ವಾಹನಗಳು ರಿಜಿಸ್ಟ್ರೇಶನ್ ಆಗಿದೆ. ಈ ಪೈಕಿ ಹೆಚ್ಚಿನ ವಾಹನಗಳು ದ್ವಿಚಕ್ರವಾಹನಗಳಾಗಿದೆ. ಇನ್ನು ಕೈಗೆಟುಕುವ ದರದ ಕಾರು ಸೇರಿದಂತೆ ಇತರ ಇವಿ ವಾಹನಗಳು ಸೇರಿದೆ. ತೆರಿಗೆ ಸೌಲಭ್ಯದ ಕಾರಣ ಮಾರ್ಚ್ 31ರಂದು ಹಲವರ ಇವಿ ವಾಹನ ರಿಡಿಸ್ಟ್ರೇಶನ್ ಆಗಿದೆ. ಎಪ್ರಿಲ್ 1, 2026ರಿಂದ ಎಲೆಕ್ಟ್ರಿಕ್ ವಾಹನಗಳಿಗೆ ಹೊಸ ತೆರೆಗೆ ನೀತಿ ಅನ್ವಯವಾಗಲಿದೆ. ಹೀಗಾಗಿ ಮಾರ್ಚ್ 31ಕ್ಕೆ ಹಳೇ ತೆರಿಗೆ ನಿಯಮದಡಿ ವಾಹನ ಖರೀದಿಸಿ ಲಾಭ ಮಾಡಿಕೊಳ್ಳಲು ಜನರು ಮುಗಿಬಿದಿದ್ದರು.