Select Location
All Locations
State
Region
City / District
ಹೊರ್ಮುಜ್ ಕುರಿತು ಅಮೆರಿಕ ನಮಗೆ ಯಾವುದೇ ಮನವಿ ಮಾಡಿಲ್ಲ: ಆಸ್ಟ್ರೇಲಿಯಾ ಪ್ರಧಾನಿ

ಹೊರ್ಮುಜ್ ಕುರಿತು ಅಮೆರಿಕ ನಮಗೆ ಯಾವುದೇ ಮನವಿ ಮಾಡಿಲ್ಲ: ಆಸ್ಟ್ರೇಲಿಯಾ ಪ್ರಧಾನಿ

ಸಿಡ್ನಿ: ಹೊರ್ಮುಜ್‌ ಕುರಿತಾಗಿ ಅಮೆರಿಕವು ನಮಗೆ ಯಾವುದೇ ಹೊಸ ಮನವಿಗಳನ್ನು ಮಾಡಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಶುಕ್ರವಾರ(ಏ.17) ಹೇಳಿದ್ದಾರೆ. ಇತ್ತೀಚೆಗೆ ಟ್ರಂಪ್ ಅವರು ‘ಹೊರ್ಮುಜ್‌ ಕುರಿತ ಆಸ್ಟ್ರೇಲಿಯಾದ ನಿಲುವಿನಿಂದ ನನಗೆ ಬೇಸರವಾಗಿದೆ. ಇರಾನ್‌ನೊಂದಿಗಿನ ಯುದ್ಧದಲ್ಲೂ ಅವರು ನಮಗೆ ಸಹಾಯ ಮಾಡುತ್ತಿಲ್ಲ’ ಎಂದು ಟೀಕಿಸಿದ್ದರು. ಆಸ್ಟ್ರೇಲಿಯಾವು ಅಮೆರಿಕದ ಮಿತ್ರರಾಷ್ಟ್ರವಾಗಿದೆ. ನಾವು ಇರಾನ್ ಯುದ್ಧದಲ್ಲಿ ನೇರವಾಗಿ ಭಾಗಿಯಾಗಿಲ್ಲ. 

ಆದರೆ, ಹೊರ್ಮುಜ್ ಜಲಸಂಧಿಯನ್ನು ತೈಲ ಸಂಚಾರಕ್ಕೆ ಮುಕ್ತವಾಗಿಸುವ ಪರ ನಾವಿದ್ದೇವೆ ಎಂದು ಹೇಳಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಕುರಿತು ಫ್ರಾನ್ಸ್, ಬ್ರಿಟನ್ ಹಾಗೂ ಅಮೆರಿಕದೊಂದಿಗೆ ಮಾತನಾಡಿದ್ದೇವೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ತಿಳಿಸಿದ್ದಾರೆ. ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ಅಮೆರಿಕವು ರಕ್ಷಣಾ ಸಹಾಯ ಮಾಡುವಂತೆ ಮನವಿ ಮಾಡಿತ್ತು, ಆ ವೇಳೆ ನಾವು ಇರಾನ್‌ ದಾಳಿಯಿಂದ ಯುಎಇ ಅನ್ನು ರಕ್ಷಿಸಲು ಇ7 ವೆಡ್ಜ್‌ಟೈಲ್ ಕಣ್ಗಾವಲು ವಿಮಾನ ಮತ್ತು ಕ್ಷಿಪಣಿಗಳನ್ನು ಕಳುಹಿಸಿದ್ದೆವು ಎಂದು ಹೇಳಿದ್ದಾರೆ.


Prajavani 1 hour ago
Home Flash News