Select Location
All Locations
State
Region
City / District
IPL 2026: ಮುಂಬೈ ನಾಯಕತ್ವ ಮತ್ತೆ ರೋಹಿತ್‌ಗೆ?

IPL 2026: ಮುಂಬೈ ನಾಯಕತ್ವ ಮತ್ತೆ ರೋಹಿತ್‌ಗೆ?

ಮುಂಬಯಿ: ಗುರುವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ 7 ವಿಕೆಟ್‌ನಿಂದ ಸೋತಿರುವ 5 ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಈ ಆವೃತ್ತಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಸತತ 4ರಲ್ಲಿ ಸೋತಿದೆ. ಹೀಗಾಗಿ ನಾಯಕತ್ವವನ್ನು ಹಾರ್ದಿಕ್‌ ಪಾಂಡ್ಯ, ರೋಹಿತ್‌ ಶರ್ಮಗೆ ಹಸ್ತಾಂತರಿಸಬೇಕೆನ್ನುವ ಒತ್ತಡ ಕೇಳಿಬರುತ್ತಿದೆ ಎನ್ನಲಾಗಿದೆ. ತಂಡಕ್ಕೆ ಹಾರ್ದಿಕ್‌ ನಾಯಕರಾದಾಗಿನಿಂದ ತಂಡದ ಪ್ರದರ್ಶನ ಕಳಪೆಯಾಗುತ್ತಿರುವ ಕಾರಣ ಅಭಿಮಾನಿಗಳು ಬೇಸರಗೊಂಡಿದ್ದಾರೆ ಎಂದು ವರದಿ ಹೇಳಿದೆ.

 ತನ್ನ ದೇಶೀಯ ಕ್ರಿಕೆಟಿಗರಿಗೆ ಮುಂಬೈ ಕ್ರಿಕೆಟ್‌ ಅಸೋಸಿಯೇಶನ್‌ (ಎಂಸಿಎ) ಗುತ್ತಿಗೆ ಆಧಾರದಲ್ಲಿ ವೇತನವನ್ನು ಘೋಷಿಸಿದೆ. ಅಂದರೆ ಆಟಗಾರರ ಪ್ರದರ್ಶನ ಮತ್ತು ಆಯ್ಕೆ ಸಮಿತಿಯ ಶಿಫಾರಸ್ಸಿಗೆ ಅನುಗುಣವಾಗಿ ಗುತ್ತಿಗೆ ರೂಪದಲ್ಲಿ ಇನ್ನು ಆಟಗಾರರಿಗೆ ವೇತನ ನೀಡಲಿದೆ. ಈ ಮೂಲಕ ಈ ಪದ್ಧತಿ ಜಾರಿಗೊಳಿಸಿದ ಮೊದಲ ದೇಶೀಯ ತಂಡವೆಂಬ ಖ್ಯಾತಿಗೆ ಎಂಸಿಎ ಪಾತ್ರವಾಗಲಿದೆ. ಹೊಸ ಪದ್ದತಿಯ ಪ್ರಕಾರ ಪ್ರಕಾರ "ಎ" ಶ್ರೇಣಿಯ ಆಟಗಾರರು ವಾರ್ಷಿಕ 12ರಿಂದ 20 ಲಕ್ಷ ರೂ., "ಬಿ" ಶ್ರೇಣಿಯ ಆಟಗಾರರು ವಾರ್ಷಿಕ 8ರಿಂದ 12 ಲಕ್ಷ ರೂ. ಮತ್ತು "ಸಿ" ಶ್ರೇಣಿಯ ಆಟಗಾರರು ವಾರ್ಷಿಕ 8 ಲಕ್ಷ ರೂ. ಪಡೆಯಲಿದ್ದಾರೆ.


Udayavani 1 hour ago
Home Flash News