Select Location
All Locations
State
Region
City / District
ರಿಲೀಸ್‌ಗೂ ಮುನ್ನವೇ ರೆಕಾರ್ಡ್: 160 ಕೋಟಿಗೆ ಸೇಲ್ ಆಯ್ತು ರಜನಿಕಾಂತ್ ಸಿನಿಮಾದ ಒಟಿಟಿ ರೈಟ್ಸ್

ರಿಲೀಸ್‌ಗೂ ಮುನ್ನವೇ ರೆಕಾರ್ಡ್: 160 ಕೋಟಿಗೆ ಸೇಲ್ ಆಯ್ತು ರಜನಿಕಾಂತ್ ಸಿನಿಮಾದ ಒಟಿಟಿ ರೈಟ್ಸ್

ತಮಿಳು ಮತ್ತು ಮಲಯಾಳಂ ಪ್ರೇಕ್ಷಕರು ಕಾದು ಕುಳಿತಿರುವ 'ಜೈಲರ್ 2' ಸಿನಿಮಾ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಈ ಸಿನಿಮಾದ ಒಟಿಟಿ ಹಕ್ಕುಗಳು ಈಗಾಗ್ಲೇ ಮಾರಾಟವಾಗಿವೆ. ಅಮೆಜಾನ್ ಪ್ರೈಮ್ ವಿಡಿಯೋ, 'ಜೈಲರ್ 2' ಚಿತ್ರದ ಒಟಿಟಿ ಹಕ್ಕುಗಳನ್ನು ಬರೋಬ್ಬರಿ 160 ಕೋಟಿ ರೂಪಾಯಿಗೆ ಖರೀದಿಸಿದೆ. ಇದು ತಮಿಳು ಚಿತ್ರರಂಗದಲ್ಲಿ ಇಲ್ಲಿಯವರೆಗಿನ ಅತಿ ದೊಡ್ಡ ಒಟಿಟಿ ಡೀಲ್ ಆಗಿದೆ. ನೆಲ್ಸನ್ ನಿರ್ದೇಶನದ ಬ್ಲಾಕ್‌ಬಸ್ಟರ್ ಚಿತ್ರ 'ಜೈಲರ್'ನ ಎರಡನೇ ಭಾಗವೇ 'ಜೈಲರ್ 2'.
ಈ ಚಿತ್ರದಲ್ಲಿ ರಜನಿಕಾಂತ್ ಅವರು 'ಮುತ್ತುವೇಲ್ ಪಾಂಡ್ಯನ್' ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. 2023ರಲ್ಲಿ ರಿಲೀಸ್ ಆದ 'ಜೈಲರ್' ಸಿನಿಮಾ, ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಅಂದಿನಿಂದಲೇ ಅಭಿಮಾನಿಗಳು ಎರಡನೇ ಭಾಗಕ್ಕಾಗಿ ಕಾಯುತ್ತಿದ್ದರು. ಜನವರಿ 14 ರಂದು ಒಂದು ಪ್ರೊಮೋ ವಿಡಿಯೋ ಜೊತೆಗೆ ಎರಡನೇ ಭಾಗವನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ನಂತರ ಮಾರ್ಚ್‌ನಲ್ಲಿ ಚಿತ್ರೀಕರಣ ಕೂಡ ಶುರುವಾಗಿದೆ.

ಮೊದಲ ಹಂತದ ಶೂಟಿಂಗ್ ಪಾಲಕ್ಕಾಡ್‌ನ ಅಟ್ಟಪ್ಪಾಡಿಯಲ್ಲಿ ನಡೆದಿತ್ತು. ಕೋಯಿಕ್ಕೋಡ್‌ನಲ್ಲೂ ಚಿತ್ರೀಕರಣ ಮಾಡಲಾಗಿದೆ. ಮಲಯಾಳಂನ ಖ್ಯಾತ ನಟ ಸೂರಜ್ ವೆಂಜರಮೂಡು ಕೂಡ ರಜನಿಕಾಂತ್ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಎರಡನೇ ಭಾಗದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರ 'ಮ್ಯಾಥ್ಯೂ' ಎಂಬ ಡಾನ್ ಪಾತ್ರ ಇರುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಲಭ್ಯವಿರುವ ಮಾಹಿತಿ ಪ್ರಕಾರ, 'ಜೈಲರ್ 2' ನಲ್ಲಿ ಮೋಹನ್‌ಲಾಲ್ ಕೂಡ ಇರಲಿದ್ದಾರೆ.


Asianet News 1 hour ago
Home Flash News