Select Location
All Locations
State
Region
City / District
ಚುನಾವಣಾ ಪ್ರಚಾರದ ವೇಳೆ ವಿಜಯ್‌ ವಾಹನ ಹತ್ತಿ ಆಶೀರ್ವಾದ ಪಡೆದ ನವ ದಂಪತಿ

Viral Video: ಚುನಾವಣಾ ಪ್ರಚಾರದ ವೇಳೆ ವಿಜಯ್‌ ವಾಹನ ಹತ್ತಿ ಆಶೀರ್ವಾದ ಪಡೆದ ನವ ದಂಪತಿ

ಚೆನ್ನೈ: ಕಾಲಿವುಡ್‌ ನಟ, ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ (Thalapathy Vijay) ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಟಿವಿಕೆ (Tamilaga Vettri Kazhagam) ಪಕ್ಷವನ್ನು ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿಗೆ ತರಬೇಕೆನ್ನುವ ನಿಟ್ಟಿನಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಚುನಾವಣಾ ರ‍್ಯಾಲಿಯಲ್ಲಿ ವಿಜಯ್‌ ಬ್ಯುಸಿಯಾಗಿದ್ದಾರೆ. ಈ ಸಮಯದಲ್ಲಿ ನವ ದಂಪತಿಗಳು ʼಜನ ನಾಯಗನ್‌ʼನಟನನ್ನು ಭೇಟಿಯಾಗಿರುವ ವಿಡಿಯೋ ವೈರಲ್‌ ಆಗಿದೆ. ಎಲೆಕ್ಷನ್‌ ಕ್ಯಾಂಪೇನ್‌ ಸಂದರ್ಭದಲ್ಲಿ ವಿಜಯ್‌ ನೆರೆದಿದ್ದ ಅಪಾರ ಬೆಂಬಲಿಗರತ್ತ ಕೈಬೀಸಿದ್ದಾರೆ. 

ಇದೇ ವೇಳೆ ನವ ವಧು -ವರ ಬಂದಿದ್ದು, ವಿಜಯ್‌ ಅವರನ್ನು ತನ್ನ ವಾಹನದ ಮೇಲೆ ಕರೆಸಿಕೊಂಡಿದ್ದಾರೆ. ದಂಪತಿ ಸಂತಸದಿಂದ ವಿಜಯ್‌ ಅವರಿಗೆ ನಮಸ್ಕರಿಸಿ ಪಾದ ಮುಟ್ಟಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಅಂತಿಮವಾಗಿ ದಂಪತಿಗಳಿಗೆ ವಿಜಯ್‌ ಪ್ರೀತಿಯಿಂದ ಹಣವನ್ನು ನೀಡಿ ನವ ಜೀವನಕ್ಕೆ ಶುಭ ಹಾರೈಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.


Udayavani 1 hour ago
Home Flash News